ಕಡಬದಲ್ಲಿ ವಕೀಲ ಅಶ್ವಿತ್ ಕಂಡಿಗರವರ ಕಛೇರಿ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ . 30:  ಇಲ್ಲಿನ ಶ್ರೀ ಗಣೇಶ್ ಬಿಲ್ಡಿಂಗ್ ನಲ್ಲಿ ನ್ಯಾಯವಾದಿ ಅಶ್ವಿತ್ ಕಂಡಿಗರವರ ಕಛೇರಿ ಅ.30ರಂದು ಶುಭಾರಂಭಗೊಂಡಿತು. ಕಛೇರಿಯನ್ನು ವಿವೇಕಾನಂದ ಕಾನೂನು ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಅಕ್ಷತಾ ಎ.ಪಿ. ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೈಕೋರ್ಟ್ ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಪ್ರೇಮ್ ಪ್ರಸಾದ್ ಶೆಟ್ಟಿ ಬೆಂಗಳೂರು, ಹೈಕೋರ್ಟ್ ನ್ಯಾಯವಾದಿ ಕೇತನ್ ಬಂಗೇರ, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ, ಬೆಳಂದೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಉದನಡ್ಕ, ಕಡಬ ಗಣೇಶ್ ಬಿಲ್ಡಿಂಗ್ ಮಾಲಕ ಸುಂದರ ಗೌಡ ಮಂಡೆಕರ ಅವರು ಮಾತನಾಡಿ ಶುಭ ಹಾರೈಸಿದರು. ನ್ಯಾಯವಾದಿ ಅಶ್ವಿತ್ ಕಂಡಿಗ ಅವರು ಸ್ವಾಗತಿಸಿ, ಮನ್ಮಥ ಅಭೀರ ಅವರು ವಂದಿಸಿದರು, ಪತ್ರಕರ್ತ ಕೆ.ಎಸ್.ಬಾಲಕೃಷ್ಣ  ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಸೌಮ್ಯ ಅಭೀರ, ವಸಂತ ಅಭೀರ, ಉಮೇಶ್ ಕಂಡಿಗ, ಮನ್ಮಥ ಅಭೀರ,ಮೋಹನ್ ಕಂಡಿಗ, ರವಿ ನಾಣಿಲ ಅವರುಗಳು ಅತಿಥಿಗಳಿಗೆ ಹೂ ಗುಚ್ಚ ನೀಡಿ ಗೌರವಿಸಿದರು.

Also Read  ಎಟಿಎಂ ಕಳ್ಳತನಕ್ಕೆ ಯತ್ನ- ನಾಲ್ವರ ಬಂಧನ

 

error: Content is protected !!
Scroll to Top