ಮೊದಲ ಹುಟ್ಟುಹಬ್ಬದ ಸಂಭ್ರಮದಲ್ಲಿ ಜೂ. ರಾಖಿಭಾಯ್ ಯಥರ್ವ್ ➤ ರಾಧಿಕಾ ಭಾವನಾತ್ಮಕ ಶುಭಾಶಯ

(ನ್ಯೂಸ್ ಕಡಬ) newskadaba.com ಬೆಂಗಳೂರು . 30: ಜೂನಿಯರ್ ರಾಖಿಭಾಯ್ ಯಥರ್ವ್ ಗೆ ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರವಾಗಿದ್ದು, ನಟಿ ರಾಧಿಕಾ ಪಂಡಿತ್ ವಿಶೇಷವಾಗಿ ಹಾಗೂ ಭಾವನಾತ್ಮಕವಾಗಿ ಶುಭಾಶಯ ತಿಳಿಸಿದ್ದಾರೆ.ಕಳೆದ ವರ್ಷ ಅಕ್ಟೋಬರ್ 30ರಂದು ಯಥರ್ವ್ ಜನಿಸಿದ್ದು, ಯಶ್ ದಂಪತಿಗಳಿಗೆ ಇದೊಂದು ಅತ್ಯಂತ ಸಂತೋಷದ ಕ್ಷಣವಾಗಿತ್ತು.

 

 

ಇದಾದ ಬೆನ್ನಲ್ಲೇ ಯಥರ್ವ್ ನಾಮಕರಣ ಸಮಾರಂಭವನ್ನು ಸಹ ರಾಖಿಭಾಯ್ ದಂಪತಿ ಸರಳ ಹಾಗೂ ಸುಂದರವಾಗಿ ಮಾಡಿದ್ದರು. ಈ ವೇಳೆ ಎರಡೂ ಕುಟುಂಬದ ಆಪ್ತರು ಮಾತ್ರ ಭಾಗವಹಿಸಿದ್ದರು. ಇದೀಗ ಯಥರ್ವ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾನೆ.ಇದೀಗ ಮಗನಿಗೆ ಭಾವನಾತ್ಮಕವಾಗಿ ಶುಭಾಶಯ ತಿಳಿಸಿರುವ ರಾಧಿಕಾ ಪಂಡಿತ್, ಯಥರ್ವ್ ಹುಟ್ಟಿದ ಕ್ಷಣ, ತಂದೆ ಯಶ್ ನೋಡಿ ಖುಷಿಪಟ್ಟಿದ್ದು, ಆಟವಾಡುತ್ತಿದ್ದಿದ್ದು, ದಂಪತಿ ಇಬ್ಬರೂ ಮುದ್ದಾಡುತ್ತಿರುವುದು, ಐರಾ, ಯಥರ್ವ್ ಇಬ್ಬರನ್ನೂ ಎತ್ತಿಕೊಂಡಿರುವ ಫೋಟೋ ಹಾಗೂ ಈ ಯಥರ್ವ್ ಫೋಟೋಗಳನ್ನು ಸೇರಿಸಿ ಕೊಲಾಜ್ ಮಾಡಿರುವ ಫೋಟೋವನ್ನು ಹಂಚಿಕೊಂಡು ಶುಭಾಶಯ ತಿಳಿಸಿದ್ದಾರೆ.

Also Read  ಟೆಂಪೋ ಅಪಘಾತದ ಬಗ್ಗೆ ಜಿಲ್ಲಾ ಎಸ್ಪಿ ಹೇಳಿದ್ದೇನು ಗೊತ್ತೇ..?

 

ಭಾವನಾತ್ಮಕ ಸಾಲುಗಳನ್ನು ಬರೆದಿರುವ ರಾಧಿಕಾ ಪಂಡಿತ್, ಯಾವಾಗಲೂ ಶಾಶ್ವತವಾಗಿ ನನ್ನ ಬೇಬಿ ಬಾಯ್ ಆಗಿರುವ ನಿನಗೆ ಹುಟ್ಟುಹಬ್ಬದ ಶುಭಾಶಯಗಳು. ಲವ್ ಯೂ ಎಂದು ಬರೆದುಕೊಂಡಿದ್ದಾರೆ

error: Content is protected !!
Scroll to Top