ಕಾರವಾರ :500 ಕೆಜಿಯ ಬೃಹತ್ ಮೀನು ಬಲೆಗೆ

(ನ್ಯೂಸ್ ಕಡಬ) newskadaba.com ಕಾರವಾರ . 30: ಸುಮಾರು 500 ಕೆ.ಜಿ.ಗೂ ಹೆಚ್ಚು ತೂಕವಿರುವ ಬೃಹತ್ ಗಾತ್ರದ ಮೂರು ತೊರ್ಕೆ ಮೀನುಗಳು ಭಟ್ಕಳ ಮೀನುಗಾರರ ಬಲೆಗೆ ಬಿದ್ದಿದ್ದು, ಮೀನುಗಾರರು ಸಂತಸಗೊಂಡಿದ್ದಾರೆ .ಇಂದು ಬೆಳಗ್ಗೆ ಅರಬ್ಬಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ ರಾಧಾಕೃಷ್ಣ, ರಾಜಶ್ರೀ ಬೋಟ್ ಗಳಿಗೆ ಬ್ರಹತ್ ಗಾತ್ರದ ಮೂರು ತೊರ್ಕೆ ಮೀನು ಸಿಕ್ಕಿದ್ದು, ಪ್ರತಿ ಮೀನಿನ ತೂಕ 500 ಕೆ.ಜಿ. ಮೀರಿಲಿದೆ ಎಂದು ಅಂದಾಜಿಸಲಾಗಿದೆ.

ಸುಮಾರು 2 ಮೀಟರ್ ಗೂ ಅಧಿಕ ಉದ್ದದ ಈ ಮೀನುಗಳನ್ನು ಹರಸಾಹಸಪಟ್ಟು ಮೀನುಗಾರರು ದಡಕ್ಕೆ ತಂದಿದ್ದು ಕ್ರೇನ್ ಮೂಲಕ ಬೋಟ್ ನಿಂದ ಮೇಲೆತ್ತಲಾಗಿದೆ.ವೈಜ್ಞಾನಿಕವಾಗಿ ರೇ ಫೀಶ್, ಮೆಂಟ್ ರೇ ಎಂದು ಕರೆಯಲ್ಪಡುವ ಈ ಮೀನು ಸಂಪೂರ್ಣ ಬೆಳವಣಿಗೆಯ ನಂತರ ಸುಮಾರು ನಾಲ್ಕು ಸಾವಿರ ಪೌಂಡ್ ತೂಕ ಹೊಂದಿರುತ್ತವೆ. ಈ ಬೃಹತ್ ಗಾತ್ರದ ಮೀನನ್ನು ನೋಡಲು ಇಂದು ಮುಂಜಾನೆ ಭಟ್ಕಳ ಬಂದರಿನಲ್ಲಿ ನೂರಾರು ಜನ ಸೇರಿದ್ದರು.

Also Read  ಭಟ್ಕಳ: ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಬುಲೆಟ್‌ ಟ್ಯಾಂಕರ್.!

error: Content is protected !!
Scroll to Top