ಲಿಫ್ಟ್​ನ​​ ಹೊಂಡಕ್ಕೆ ಬಿದ್ದ 2 ವರ್ಷದ ಮಗು ಮೃತ್ಯು

(ನ್ಯೂಸ್ ಕಡಬ) newskadaba.com ಬೆಂಗಳೂರು . 30: ಬೆಂಗಳೂರಿನಲ್ಲಿ ಪೋಷಕರು ಕೊಂಚ ಮೈಮರೆತಿದ್ದಕ್ಕೆ 2 ವರ್ಷದ ಮಗುವೊಂದು ಜೀವ ಕಳೆದುಕೊಂಡಿದೆ. ಬೆಂಗಳೂರಿನ ಕೆಂಗೇರಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಲಿಫ್ಟ್​ನ ಗುಂಡಿಗೆ ಬಿದ್ದು ಎರಡು ವರ್ಷದ ಮಗು‌ ಸಾವನ್ನಪ್ಪಿದೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂದು ಬೆಳಗ್ಗೆ 8.30ರ ವೇಳೆಗೆ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಲಿಫ್ಟ್​ನ ಗುಂಡಿಗೆ ಬಿದ್ದ 2 ವರ್ಷದ ಮಗು ವಿನೋದ್​ ತೀವ್ರವಾಗಿ‌ ಗಾಯಗೊಂಡಿತ್ತು. ತಕ್ಷಣ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ‌ ಮಗು ಸಾವನ್ನಪ್ಪಿದೆ.ಕಟ್ಟಡ ನಿರ್ಮಿಸುತ್ತಿದ್ದ ರಮೇಶ್ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ.

Also Read  ಪುಲ್ವಾಮಾ ದಾಳಿ ಕುರಿತು ಅವಹೇಳನಕಾರಿ ಪೋಸ್ಟ್➤ ಇಂಜಿನಿಯರಿಂಗ್ ವಿದ್ಯಾರ್ಥಿಗೆ 5 ವರ್ಷ ಜೈಲು ಶಿಕ್ಷೆ!

 

error: Content is protected !!
Scroll to Top