ಸಂಘಪರಿವಾರದ ಸದಸ್ಯರಿಂದ ದನ ಕಳ್ಳತನಕ್ಕೆ ಯತ್ನ ➤ ರೆಡ್ ಹ್ಯಾಂಡ್ ಆಗಿ ಹಿಡಿದ ಸ್ಥಳೀಯರು

(ನ್ಯೂಸ್ ಕಡಬ) newskadaba.com ಕಲ್ಲಡ್ಕ . 29: ದನ ಕದಿಯಲು ಪ್ರಯತ್ನಿಸಿದ ಮೂವರನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ ಘಟನೆ ಇಲ್ಲಿನ ಕಲ್ಲಡ್ಕದ ಕುಂಟಿಬಾಪು ಎಂಬಲ್ಲಿ ನಡೆದಿದೆ. ವಶಕ್ಕೆ ಪಡೆಯಲಾದ ಆರೋಪಿಗಳಲ್ಲಿ ನವೀನ್, ಮಾಧವ ಸುಧೆಕಾರ್ ಸಂಘಪರಿವಾರದ ಸದಸ್ಯರಾಗಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.

 

 

ಆರೋಪಿಗಳು ಬೀದಿ ಬದಿ ಮೇಯುತ್ತಿದ್ದ ದನವೊಂದನ್ನು ಪಿಕಪ್ ಗೆ ಲೋಡ್ ಮಾಡಿದ್ದು ಈ‌ ಸಂದರ್ಭದಲ್ಲಿ ಸ್ಥಳೀಯರು ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸಂಘ ಪರಿವಾರದವರೆನ್ನಲಾದ ಆರೋಪಿಗಳ ಕೃತ್ಯದಿಂದ ಸ್ಥಳೀಯರಲ್ಲಿ ಹಲವು ಸಂಶಯಗಳು ಹಬ್ಬಿವೆ. ಕೋಮು ಸೂಕ್ಷ್ಮ ಪ್ರದೇಶವಾದ ಕಲ್ಲಡ್ಕದಲ್ಲಿ ಈದ್ ಮೀಲಾದ್ ಸಂದರ್ಭ ಈ ರೀತಿ ದನ ಕಳ್ಳತನ ಮಾಡಿ, ಶಾಂತಿ ಕದಡುವ ಷಡ್ಯಂತ್ರ ನಡೆದಿದೆಯೇ ಎಂಬ ಸಂದೇಹ ಸ್ಥಳೀಯರನ್ನು ಕಾಡಿದೆ.

Also Read  ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ

 

error: Content is protected !!
Scroll to Top