ತುಳು ಭಾಷೆಗೆ ಮಾನ್ಯತೆ ಕೊಡಲು ಸರ್ಕಾರವನ್ನು ಒತ್ತಾಯಿಸುವಂತೆ ಡಾ.ವೀರೆಂದ್ರ ಹೆಗ್ಗಡೆಗೆ ಮನವಿ

(ನ್ಯೂಸ್ ಕಡಬ) newskadaba.com ಧರ್ಮಸ್ಥಳ . 29: ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮಾಡಲು ಸರಕಾರಕ್ಕೆ ಸಮಸ್ತ ಜನರ ಪರವಾಗಿ ಒತ್ತಾಯಿಸುವಂತೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಜೈ ತುಳುನಾಡ್‌ ಸಂಘಟನೆಯ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಜೈ ತುಳುನಾಡ್‌ ಬೆಂಗಳೂರು ಘಟಕದ ಸದಸ್ಯ ಧನಂಜಯ್‌ ಆಚಾರ್ಯ ಅವರು ಓಂ ಎಂದು ತುಳು ಲಿಪಿಯಲ್ಲಿ ಬರೆದಂತಹ ಫಲಕವನ್ನು ಕಾಣಿಕೆಯಾಗಿ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ನೀಡಿದರು. ಜೈ ತುಳುನಾಡ್‌ ಸಂಘಟನೆ ವತಿಯಿಂದ ಡಾ. ಡಿ. ವೀರೇಂದ್ರ ಹೆಗ್ಗಡೆ ಎಂಬ ತುಳು ಲಿಪಿಯ ನಾಮಫಲಕವನ್ನು ಗೌರವ ಕಾಣಿಕೆಯಾಗಿ ನೀಡಲಾಯಿತು. ಇದೇ ವೇಳೆ ಧರ್ಮಸ್ಥಳದ ಮುಖ್ಯ ನಾಮಫಲಕವನ್ನು ತುಳು ಲಿಪಿಯಲ್ಲಿಯೂ ಇರುವಂತೆ ಮತ್ತು ಧರ್ಮಸ್ಥಳದಲ್ಲಿ ಸೂಚನಾ ವ್ಯವಸ್ಥೆಯನ್ನು ತುಳು ಭಾಷೆಯಲ್ಲಿಯೂ ತಿಳಿಸುವಂತೆ ಆಗಬೇಕು ಎಂದು ಮನವಿ ಮಾಡಲಾಯಿತು.

Also Read  ಆ. 14 : ಪ್ರಗತಿ ಪರಿಶೀಲನಾ ಸಭೆ

 

error: Content is protected !!
Scroll to Top