ಕಾರವಾರ: ಅಕ್ರಮ ಮದ್ಯ ಸಾಗಾಟ, ಓರ್ವನ ಬಂಧನ.!!

(ನ್ಯೂಸ್ ಕಡಬ) newskadaba.com ಕಾರವಾರ . 29: ಗೋವಾದಿಂದ ಸಮುದ್ರ ಮಾರ್ಗದ ಮೂಲಕ ಮದ್ಯ ಸಾಗಾಟ ಮಾಡುತ್ತಿರುವ ವೇಳೆ ಪೊಲೀಸರು ದಾಳಿ ನಡೆಸಿದ ಘಟನೆ ಕಾರವಾರ ತಾಲೂಕಿನ ಕಡವಾಡದಲ್ಲಿ ನಡೆದಿದೆ.

ದೋಣಿಯ ಮುಲಕ ಮದ್ಯ ಸಾಗಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಕಡವಾಡದ ರೋಶನ್ ಬಾಂದೇಕರ್ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ. ಗೋವಾದಿಂದ ಸಮುದ್ರ ಮಾರ್ಗವಾಗಿ ದೋಣಿ ಮೂಲಕ ತಂದಿದ್ದ ಅಕ್ರಮ ಗೋವಾ ಮದ್ಯವನ್ನು ಸಾಗಿಸಲು ಯತ್ನಿಸುತ್ತಿರುವಾಗ ಪೊಲೀಸರು ದಾಳಿ ನಡೆಸಿದ್ದರು. ಸುಮಾರು16 ಸಾವಿರ ಮೌಲ್ಯದ 85 ಲೀಟರ್ ಮದ್ಯ ಸಹಿತ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.ಡಿವೈಎಸ್ಪಿ ಅರವಿಂದ ಕಲಗುಜ್ಜಿ ಹಾಗೂ ಸಿಪಿಐ ಸಂತೋಷ ಕುಮಾರ ಅವರ ಮಾರ್ಗದರ್ಶನದಲ್ಲಿ ಪಿಎಸೈ ರೇವಣಸಿದ್ದಪ್ಪ ದಾಳಿ ನಡೆಸಿದ್ದರು.

Also Read  ಬ್ರಿಟನ್‌ನಿಂದ ಮಂಗಳೂರಿನ 56 ಮಂದಿಯ ಆಗಮನ ➤ ಕೊರೋನಾ 2ನೇ ಅಲೆಯ ಭೀತಿಯಲ್ಲಿ ಕರಾವಳಿ

 

 

error: Content is protected !!
Scroll to Top