ಬೆಳ್ತಂಗಡಿ: ಗ್ರಾಮಗಳಿಗೆ ನುಗ್ಗಿದ ಆನೆಗಳ ಹಿಂಡು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಅ. 28. ಚಾರ್ಮಾಡಿ ಗ್ರಾಮ ವ್ಯಾಪ್ತಿಯ ಚಿಬಿದ್ರೆ ಗ್ರಾಮದ ನಡ್ತಿಲು, ನಳಿಲು ಹಾಗೂ ಅನ್ನಾರು ಪ್ರದೇಶಗಳಲ್ಲಿ ಮಂಗಳವಾರ ರಾತ್ರಿ ಮರಿಯಾನೆ ಸಹಿತ 6 ಕಾಡಾನೆಗಳು ಕಂಡುಬಂದಿವೆ.

ಇಲ್ಲಿ ಸುಮಾರು 20ರಷ್ಟು ಕೃಷಿ ಕುಟುಂಬಗಳಿದ್ದು, ಯಾವುದೇ ಹಾನಿ ಮಾಡದ  ಆನೆಗಳು  ಸಮೀಪದ ಕಾಡಿನಲ್ಲಿ ಬೀಡು ಬಿಟ್ಟಿವೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಾಹಿತಿ ತಿಳಿದ ಪಡೆದ ಅರಣ್ಯ ಇಲಾಖೆಯ ಬೆಳ್ತಂಗಡಿ ವಲಯಾರಣ್ಯಾಧಿಕಾರಿ ತ್ಯಾಗರಾಜ್ ನಿರ್ದೇಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಭವಾನಿ ಶಂಕರ್,ಅರಣ್ಯ ವೀಕ್ಷಕ ಪಾಂಡುರಂಗ ಹಾಗೂ ಸ್ಥಳೀಯರ ಸಹಕಾರದಲ್ಲಿ ಪಟಾಕಿ ಸಿಡಿಸುವ ಮೂಲಕ ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸುವ ಕಾರ್ಯಾಚರಣೆಯಲ್ಲಿ ತೊಡಗಿವೆ. ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಚಿರತೆ ಕೂಡಾ ಹೆದ್ದಾರಿ ಬದಿ ಪ್ರತ್ಯಕ್ಷವಾಗಿತ್ತು.

Also Read  ಕಡಬ: ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು

error: Content is protected !!
Scroll to Top