ಭಟ್ಕಳ : ವೆಂಕಟಾಪುರ ನದಿಯಲ್ಲಿ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಭಟ್ಕಳ . 28:  ತಾಲೂಕಿನ ಶಿರಾಲಿ ಗ್ರಾ.ಪಂ ವ್ಯಾಪ್ತಿಯ ವೆಂಕಟಾಪುರ ನದಿಯಲ್ಲಿ ಬುಧವಾರ ಮೃತದೇಹವೊಂದು ಪತ್ತೆಯಾಗಿದೆ. ವ್ಯಕ್ತಿಯು ಧರಿಸಿದ್ದ ಅಂಗಿ ಕಾಲರ್ ಪಟ್ಟಿಯಲ್ಲಿದ್ದ ಟೈಲರ್ ಮೊಬೈಲ್ ನಂಬರಿನ ಆಧಾರದಲ್ಲಿ ವ್ಯಕ್ತಿಯ ಪರಿಚಯವನ್ನು ಪತ್ತೆ ಮಾಡಿದ ಭಟ್ಕಳ ಗ್ರಾಮೀಣ ಠಾಣೆಯ ಪಿ.ಎಸ್.ಐ ಬೆಂಗಳೂರಿನ ಪಾದಾರಾಯಪುರದ ನಿವಾಸಿ ಕೆ.ಎಸ್.ಆರ್.ಟಿ.ಸಿ ನಿವೃತ್ತ ಉದ್ಯೋಗಿ ಎಂದು ಗುರುತಿಸಲಾಗಿದೆ.

 

ಮೃತದೇಹವನ್ನು ಭಟ್ಕಳದ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿಡಲಾಗಿದ್ದು ಬೆಂಗಳೂರಿನಲ್ಲಿರುವ ಕುಟುಂಬದವರಿಗೆ ಮಾಹಿತಿಯನ್ನು ನೀಡಲಾಗಿದೆ. ಭಟ್ಕಳದ ಸೂಸಿಶಿಯಲ್ ಡೆಮೊಕ್ರಟಿಕ್ ಪಾರ್ಟಿಯ ಕಾರ್ಯಕರ್ತರ ಸಹಾಯದಿಂದ ಗ್ರಾಮೀಣಾ ಪೊಲೀಸರು ಮೃತದೇಹವನ್ನು ನದಿಯಿಂದ ಮೇಲಕ್ಕೆ ತಂದು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

Also Read  ಬಸ್ ನದಿಗೆ ಉರುಳಿ ಬಿದ್ದು 14 ಮಂದಿ ಸಾವು..!

 

error: Content is protected !!
Scroll to Top