ಕುಮಾರಸ್ವಾಮಿ ವಿದ್ಯಾಲಯದಲ್ಲಿ ಎಬಿವಿಪಿ ವತಿಯಿಂದ ನಗರ ಅಭ್ಯಾಸ ವರ್ಗ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ , ಅ. 28. ಅಖಿಲ ಭಾರತಿ ವಿದ್ಯಾರ್ಥಿ ಪರಿಷತ್‌ ಕುಕ್ಕೆ ಸುಬ್ರಹ್ಮಣ್ಯ ಘಟಕದ ವತಿಯಿಂದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ನಗರ ಅಭ್ಯಾಸ ವರ್ಗ ನಡೆಯಿತು. ಕಾರ್ಯಕ್ರಮವನ್ನು ಸ್ಮಿತಾ ಹೆಗ್ಡೆ ಜನರಲ್‌ ಮ್ಯಾನಜರ್‌ ಆರ್.ಎನ್.ಎಸ್‌ ಓನ್‌ ಸುಬ್ರಹ್ಮಣ್ಯ ಇವರು ಉದ್ಘಾಟಿಸಿದರು.

 

 

ವಿದ್ಯಾರ್ಥಿ ಪರಿಷತ್‌ ನ ಸಂಘಟನಾತ್ಮಕ ಕಾರ್ಯಗಳಲ್ಲಿ ಅಭ್ಯಾಸ ವರ್ಗ ಪ್ರಮುಖ ಪಾತ್ರ ವಹಿಸುತ್ತದೆ. ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ಪುನರ್‌ ನಿರ್ಮಾಣ ಎಂಬ ಉದಾತ್ತವಾದ ಚಿಂತನೆಯಲ್ಲಿ ಮುನ್ನಡೆಯುತ್ತಿದೆ. ವಿದ್ಯಾರ್ಥಿ ಪರಿಷತ್‌ ನ ಕಾರ್ಯಕರ್ತರ ವ್ಯಕ್ತಿತ್ವ ನಿರ್ಮಾಣದ ಕೇಂದ್ರಬಿಂದು ಅಭ್ಯಾಸ ವರ್ಗ. ಈ ಅಭ್ಯಾಸ ವರ್ಗದಲ್ಲಿ ವಿದ್ಯಾರ್ಥಿ ಪರಿಷತ್‌ ನ ಸೈದ್ಧಾಂತಿಕ ಭೂಮಿಕೆ, ನಮ್ಮ ಕಾರ್ಯಪದ್ಧತಿ ವಿಷಯಗಳ ಬಗ್ಗೆ ಅವಧಿಗಳನ್ನು ಮಂಗಳೂರು ವಿಭಾಗ ಪ್ರಮುಖರಾದ ಕೇಶವ್‌ ಬಂಗೇರ, ಹಾಗೂ ಬಸವೇಶ್‌ ಕೋರಿಯವರು ನಡೆಸಿಕೊಟ್ಟರು. ನಂತರ ನಡೆದ ಸಮಾರೋಪ ಸಮಾರಂಭದಲ್ಲಿನ ಸೀತಾರಾಮ ಇವರು ಸಮಾರೋಪ ಭಾಷಣಗೈದರು. ಈ ಸಂದ್ರಭದಲ್ಲಿ ನೂತನ ಪದಾಧಿಕಾರಗಳ ಆಯ್ಕೆ ಮಾಡಲಾಯಿತು. ನಗರ ಕಾರ್ಯದರ್ಶಿ ಇಲೈಅರಸ್‌, ನಗರ ಸಹ ಕಾರ್ಯದರ್ಶಿಯಾಗಿ ತರುಣ್‌, ಚೈತನ್ಯ, ನವೀನ್‌, ತೀರ್ಥಪ್ರಸಾದ್‌, ಹಾಗೂ ಅಧ್ಯಯನ ವೃತ ಪ್ರಮುಖ್‌ ಆಗಿ ಸೌಜನ್ಯ, ಜಯಶ್ರೀ, ಹಾಗೂ ಸಾಮಾಜಿಕ ಜಾಲತಾಣ ಪ್ರಮುಖರಾಗಿ ತೇಜಸ್‌, ಸಹ ಸಾಮಾಜಿಕ ಜಾಲತಾಣ ಪ್ರಮುಖ್‌ ಹರಿಚಂದ್ರ, ಹಾಗೂ ಹಾಸ್ಟೇಲ್‌ ಪ್ರಮುಖರಾಗಿ ಕಾರ್ತೀಕ್‌ ಹಾಗೂ ಶರತ್‌ ಇವರು ಆಯ್ಕೆಯಾದರು.

 

error: Content is protected !!

Join the Group

Join WhatsApp Group