ಆರೋಗ್ಯ ಸೇತು ಆ್ಯಪ್‌ ಸೃಷ್ಟಿಸಿದ್ದು ಯಾರು..?! ➤ ಇಲ್ಲಿದೆ ಅಚ್ಚರಿಯ ಉತ್ತರ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ . 28: ಸರಕಾರ ಮೇಲಿಂದ ಮೇಲೆ ಆರೋಗ್ಯ ಸೇತು ಆ್ಯಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಸೂಚಿಸಿದ್ದರಿಂದ ಕೋಟ್ಯಂತರ ಜನರು ಆರೋಗ್ಯ ಸೇತು ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಂಡಿದ್ದಾರೆ. ಆದರೆ ಇದನ್ನು ಸೃಷ್ಟಿಸಿದ್ದು ಯಾರು ಎಂಬುದು ಸರಕಾರಕ್ಕೇ ಗೊತ್ತಿಲ್ಲ. ಅಚ್ಚರಿಯಾದರೂ ಇದು ಸತ್ಯ.

 

ಆರೋಗ್ಯ ಸೇತು ಆ್ಯಪ್‌ನ ವೆಬ್‌ಸೈಟ್‌ನಲ್ಲಿ ಇದನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ ಮತ್ತು ಐಟಿ ಇಲಾಖೆ ಸೃಷ್ಟಿಸಿದೆ ಎಂಬ ಮಾಹಿತಿ ಸಿಗುತ್ತದೆ. ಆದರೆ ಈ ಎರಡೂ ಇಲಾಖೆಗಳು ಆ್ಯಪ್‌ ಸೃಷ್ಟಿಸಿದ್ದು ಯಾರು ಎಂಬ ಬಗ್ಗೆ ತಮ್ಮ ಬಳಿಯಲ್ಲಿ ಮಾಹಿತಿ ಇಲ್ಲ ಎಂದು ಆರ್‌ಟಿಐ ಪ್ರಶ್ನೆಗೆ ಉತ್ತರಿಸಿವೆ.ಈ ರೀತಿಯ ಹಾರಿಕೆಯ ಉತ್ತರ ನೀಡಿದ್ದಕ್ಕೆ ಕೇಂದ್ರ ಮಾಹಿತಿ ಆಯೋಗ ಸರಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.”ಆ್ಯಪ್ ಅನ್ನು ಯಾರು ರೂಪಿಸಿದ್ದಾರೆ, ಕಡತಗಳು ಎಲ್ಲಿವೆ ಎಂಬುದನ್ನು ವಿವರಿಸಲು ಮುಖ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ.ನವೆಂಬರ್‌ 24 ರಂದು ತನ್ನ ಮುಂದೆ ಹಾಜರಾಗುವಂತೆ ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಿದೆ.

Also Read  ಉಪ್ಪಿನಂಗಡಿ: ಪ್ರಚೋದನಕಾರಿ ಭಾಷಣ ಮಾಡಿದ ಶಾಸಕ ಹರೀಶ್ ಪೂಂಜಾ ಮತ್ತು ಈಶ್ವರಪ್ಪ ವಿರುದ್ದ ಎಸ್ಡಿಪಿಐ ದೂರು

 

 

error: Content is protected !!
Scroll to Top