(ನ್ಯೂಸ್ ಕಡಬ) newskadaba.com ನವದೆಹಲಿ, ಅ. 28. ವಿಶ್ವದ ಅತ್ಯಂತ ಬಲಿಷ್ಠ ರಫೇಲ್ ಪೈಟರ್ ಜೆಟ್‍ಗಳನ್ನು ಹೊಂದಿರುವ ಭಾರತೀಯ ವಾಯು ಪಡೆಗೆ (ಐಎಎಫ್) ಮುಂದಿನ ವರ್ಷ ಏಪ್ರಿಲ್ ಅಂತ್ಯದೊಳಗೆ ಇನ್ನೂ 16 ಯುದ್ಧ ವಿಮಾನಗಳು ಸೇರ್ಪಡೆಯಾಗಲಿವೆ. ಈಗಾಗಲೇ 5 ರಫೇಲ್ ಫೈಟರ್ ಜೆಟ್‍ಗಳು ಅಂಬಾಲಾ ವಾಯು ನೆಲೆಯ ಗೋಲ್ಡನ್ ಆಯರೋ ಸ್ಕ್ವಾರ್ಟನ್ ನಲ್ಲಿ ಸೇವೆಗೆ ನಿಯೋಜಿತವಾಗಿದೆ.
ಇದಲ್ಲದೆ ಫ್ರಾನ್ಸ್ ನ ಇನ್ನು 16 ಯುದ್ಧ ವಿಮಾನಗಳು ಏಪ್ರಿಲ್ ಅಂತ್ಯದೊಳಗೆ ನಾಲ್ಕು ಹಂತಗಳಲ್ಲಿ ಭಾರತಕ್ಕೆ ಆಗಮಿಸಲಿದ್ದು, ನವೆಂಬರ್ 5ರಂದು ಮೂರು ರಫೇಲ್ ಪೈಟರ್ ಜೆಟ್‍ಗಳು ಈಶಾನ್ಯ ಫ್ರಾನ್ಸ್ ನ ಡಸೋಲ್ಟ್ ಏವಿಯೇಷನ್ ಸಂಸ್ಥೆಯಿಂದ ನೇರವಾಗಿ ಭಾರತಕ್ಕೆ ಬಂದಿಳಿಯಲಿವೆ. ಈ ಪೈಟರ್ ಜೆಟ್‍ಗಳು ಮಾರ್ಗ ಮಧ್ಯೆ ಇಂಧನಕ್ಕಾಗಿ ಎಲ್ಲೂ ನಿಲುಗಡೆಯಾಗುವುದಿಲ್ಲ. ಗಗನದಲ್ಲೇ ಅಗತ್ಯವಾದ ಇಂಧನ ಭರ್ತಿ ಮಾಡಿಕೊಂಡು ಭಾರತದ ಐಎಎಫ್ ವಾಯು ನೆಲೆಗೆ ಆಗಮಿಸಲಿವೆ. ಇವುಗಳಲ್ಲದೆ ಜನವರಿಯಲ್ಲಿ 3 ಮತ್ತು ಮಾರ್ಚ್‍ನಲ್ಲಿ ಇನ್ನೂ 3 ಸಮರ ವಿಮಾನಗಳು ಭಾರತಕ್ಕೆ ಆಗಮಿಸಲಿವೆ. ಕೊನೆಯ ಹಂತದಲ್ಲಿ ಏಪ್ರಿಲ್ ಅಂತ್ಯದೊಳಗೆ 7 ರಫೇಲ್ ಜೆಟ್‍ಗಳು ಐಎಎಫ್‍ಗೆ ಸೇರ್ಪಡೆಯಾಗಲಿವೆ. ಇದರೊಂದಿಗೆ ಭಾರತಕ್ಕೆ ಫ್ರಾನ್ಸ್ ನಿಂದ ಒಟ್ಟು 21 ರಫೇಲ್ ವಿಮಾನಗಳು ಸೇರ್ಪಡೆಯಾದಂತಾಗಿವೆ.