ಬೆಂಗಳೂರು: ಕ್ರಿಕೆಟ್‌ ದಂಧೆ ➤ ಇಬ್ಬರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 28. ಐಪಿಎಲ್ ಕ್ರಿಕೆಟ್ ಪಂದ್ಯಗಳ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿ, 13.50 ಲಕ್ಷ ನಗದು ಜಪ್ತಿ ಮಾಡಿದ್ದಾರೆ. ಬಂಧಿತ ಆರೋಪಿಗಳನ್ನು ಸಹಕಾರ ನಗರದ ಹೊಯ್ಸಳಗೌಡ (48) ಹಾಗೂ ವೈಯಾಲಿಕಾವಲ್‌ನ ನರಸಿಂಹಮೂರ್ತಿ (38) ಎಂದು ಗುರುತಿಸಲಾಗಿದೆ.

 

 

ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯದ ವೇಲೆ ಆರೋಪಿಗಳು ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಿದ್ದರು ಎಂದು ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಹೇಳಿದ್ದಾರೆ. ಗೆದ್ದವರಿಗೆ ತಾವೇ ಹೋಗಿ ಹಣ ನೀಡುತ್ತಿದ್ದರು. ಸೋತವರಿಂದ ಹಣ ವಸೂಲಿ ಮಾಡಲು ಸಹ ತಾವೇ ಹೋಗುತ್ತಿದ್ದರು. ಇತ್ತೀಚೆಗೆ ಮಲ್ಲೇಶ್ವರ ಬಳಿ ಆರೋಪಿಗಳು ಹಣ ಕಟ್ಟಿಸಿಕೊಳ್ಳಲು ಬಂದಿದ್ದಾಗ ದಾಳಿ ಮಾಡಿ ಬಂಧಿಸಲಾಯಿತು ಎಂದು ತಿಳಿಸಿದರು. ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಆರಂಭವಾದಾಗಿನಿಂದಲೂ ಆರೋಪಿಗಳು ಬೆಟ್ಟಿಂಗ್ ನಡೆಸಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಹೇಳಿದರು.

Also Read  ಎಸ್ ವೈಎಸ್ ಕಡಬ ಸೆಂಟರ್ ಪುನರ್ ರಚನೆ ➤ ಅಧ್ಯಕ್ಷರಾಗಿ ಉಮರ್ ಮುಸ್ಲಿಯಾರ್ ಮರ್ಧಾಳ, ಕಾರ್ಯದರ್ಶಿಯಾಗಿ ಬಶೀರ್ ಚೆನ್ನಾರ್ ಪುನರಾಯ್ಕೆ

 

error: Content is protected !!
Scroll to Top