ಕಾರ್ಕಳ :ವಾಹನದ ಟಯರ್ ಸಿಡಿದು ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಕಾರ್ಕಳ . 28: ಕಾರ್ಕಳದಲ್ಲಿ ಕ್ವಾಲೀಸ್ ವಾಹನದ ಟಯರ್ ಸಿಡಿದು ಯುವಕ ಸಾವನ್ಬಪ್ಪಿದ ಘಟನೆ ಕುತ್ಲೂರು ಸಮೀಪದ ಕುಕ್ಕೆಜೆಯಲ್ಲಿ ನಡೆದಿದೆ. ಕೋಲಾರದ ನಸಾಪುರದ ರಾಕೇಶ್(24) ಮೃತ ದುರ್ದೈವಿ.

 

ಕಳೆದ ದಿನ ಕೋಲಾರದ ನರ್ಸಾಪುರದಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಕ್ವಾಲೀಸ್ ವಾಹನದ ಟಯರ್ ಸಿಡಿದು ವಾಹನ ಪಲ್ಟಿಯಾಗಿದೆ. ಘಟನೆಯಲ್ಲಿ ಕ್ವಾಲೀಸ್ ನಲ್ಲಿದ್ದ ಇಬ್ಬರಿಗೆ ಗಾಯಗಳಾಗಿತ್ತು, ತಕ್ಷಣವೇ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ರಾಕೇಶ್ ಎಂಬುವರು ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

 

Also Read  38ನೇ ರಾಷ್ಟ್ರೀಯ ಗೇಮ್ಸ್‌: ಟೆನಿಸ್‌ನಲ್ಲಿ ಕರ್ನಾಟಕಕ್ಕೆ ಬೆಳ್ಳಿ, ತಮಿಳುನಾಡಿಗೆ ಚಿನ್ನ

 

error: Content is protected !!
Scroll to Top