ಸವಣೂರು: ಓಮ್ನಿಮತ್ತು ಸ್ವಿಫ್ಟ್ ಕಾರುಗಳ ಮಧ್ಯೆ ಅಪಘಾತ ➤ ಓಮ್ನಿ ಚಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಸವಣೂರು, ಅ. 27. ಅ.25ರಂದು ಪುತ್ತೂರು- ಕಾಣಿಯೂರು ರಸ್ತೆಯ ಭಕ್ತಕೋಡಿ ಎಂಬಲ್ಲಿ ಕಾರುಗಳ ಮಧ್ಯೆ ಅಪಘಾತ ಸಂಭವಿಸಿ ತೀವ್ರ ಗಾಯಗೊಂಡ ಓಮ್ನಿ ಚಾಲಕ ಇಂದು ಮೃತಪಟ್ಟಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಬೆಳ್ಳಾರೆ ಸಮೀಪದ ಪಡ್ಪಿನಂಗಡಿಯ ಅಬ್ದುಲ್ ರಹಿಮಾನ್ ಎಂದು ಗುರುತಿಸಲಾಗಿದೆ.

 

 

ಪುತ್ತೂರು ಕಡೆಯಿಂದ ಸವಣೂರು ಕಡೆಗೆ ಹೋಗುತ್ತಿದ್ದ ಓಮ್ನಿ ಕಾರಿಗೆ ವಿರುದ್ಧ ದಿಕ್ಕಿನಿಂದ ಬಂದ ಸ್ವಿಫ್ಟ್ ಕಾರೊಂದು ಢಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಓಮ್ನಿ ಮತ್ತು ಸ್ವಿಫ್ಟ್ ಎರಡೂ ಕಾರು  ಜಖಂಗೊಂಡಿದ್ದು, ಢಿಕ್ಕಿಯ ರಭಸಕ್ಕೆ ಓಮ್ನಿ ಚಾಲಕ ಅಬ್ದುಲ್ ರಹಿಮಾನ್ ಎಂಬವರ ಎರಡು ಕಾಲಿಗೆ ಗಂಭೀರ ಗಾಯವಾಗಿತ್ತು. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.

Also Read  18 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿ ಬಳಿಕ ಆಕೆಗೆ ವಿಷ ಕುಡಿಸಿದ ದುಷ್ಕರ್ಮಿಗಳು

 

error: Content is protected !!
Scroll to Top