(ನ್ಯೂಸ್ ಕಡಬ) newskadaba.com ಕೊಕ್ಕಡ ಅ. 27: ದಕ್ಷಿಣಕನ್ನಡ ಜಿಲ್ಲೆಯ ನೆಲ್ಯಾಡಿ ,ಕೊಕ್ಕಡ ಪರಿಸರದಲ್ಲಿ ಭಿಕ್ಷೆ ಬೇಡಿ ಅಲೆಮಾರಿಯಂತೆ ತಿರುಗುತ್ತಿದ್ದ ಭಿಕ್ಷುಕರೋರ್ವರು ಕಳೆದ ದಿನ ನಿಧನರಾಗಿದ್ದಾರೆ. ಸೆಲೆಬ್ರಿಟಿಗೆ ಗಳಿಗೆ ಸಲ್ಲುವಂತಹ ಗೌರವವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ ಇಪ್ಪತೈದು ವರ್ಷಗಳ ಹಿಂದೆ ನೆಲ್ಯಾಡಿ ಹಾಗೂ ಕೊಕ್ಕಡ ಪರಿಸರದಲ್ಲಿ ದಿಢೀರನೆ ಪ್ರತ್ಯಕ್ಷನಾಗಿದ್ದ ಇವರಿಗೆ ಮೊದ ಮೊದಲು ಯಾವುದೋ ಪ್ರಕರಣ ಛೇಧಿಸಲು ಬಂದಿರುವ ಸಿ.ಐ.ಡಿ ಯೇ ಇರಬೇಕೆಂದು ಊಹಿಸಿದ್ದರು.
ಯಾರಲ್ಲೂ ಮಾತನಾಡದೆ, ತನ್ನ ಪಾಡಿಗೆ ತಾನು ಇರುತ್ತಿದ್ದ ಈತನನ್ನು ನೆಲ್ಯಾಡಿ ಭಾಗದ ಜನ ಸಿ.ಐ.ಡಿ ಶಂಕರ್ ಎಂದೇ ಕೆರೆಯುತ್ತಿದ್ದರು ತಾನು ಭಿಕ್ಷೆ ಮೂಲಕ ಸಂಗ್ರಹಿದ ಹಣವನ್ನು ತನಗೆ ಅನ್ನ ನೀಡಿದ ಹೋಟೆಲ್ ಹಾಗೂ ಇತರ ಅಂಗಡಿಯ ಟೇಬಲ್ ನಲ್ಲಿ ಹಾಕಿ ಹೋಗುತ್ತಿದ್ದ. ಹೀಗೆ ಆ ಭಾಗದ ಜನರ ಒಡನಾಡಿಯಾಗಿದ್ದ ಶಂಕರ್ ಕಳೆದ ದಿನ ಅಸ್ವಸ್ಥಗೊಂಡು ನಿಧನರಾಗಿದ್ದಾರೆ.ಕೆಸರನ್ನೆಲ್ಲಾ ಮೈಗೊತ್ತಿಕೊಂಡು ಅಲೆದಾಡುತ್ತಿದ್ದ ಶಂಕರ್ ಗೆ ನೆಲ್ಯಾಡಿ ಹಾಗೂ ಕೊಕ್ಕಡ ಭಾಗದ ಜನ ಚಿಕಿತ್ಸೆಯನ್ನೂ ನೀಡಿದ್ದರು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಂಕರ್ ಕಳೆದ ದಿನ ನಿಧನರಾದ ಸುದ್ಧಿ ತಿಳಿದ ಪರಿಸರದ ಜನ ಜಾತಿ-ಧರ್ಮದ ಎಲ್ಲೆ ಮೀರಿ ಆತನ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.ಸ್ಥಳೀಯ ಪೋಲೀಸರೂ ಶಂಕರ್ ನಿಧನಕ್ಕೆ ಗೌರವ ಸಲ್ಲಿಸಿದ್ದರು.ಬೈಕ್, ಆಟೋ, ಕಾರು ಸೇರಿದಂತೆ ನೂರಕ್ಕೂ ಮಿಕ್ಕಿದ ವಾಹನಗಳಲ್ಲಿ ಶಂಕರ್ ಮೃತದೇಹದ ಮೆರವಣಿಗೆ ನಡೆಸಲಾಗಿತ್ತು.