ಕಾಸರಗೋಡು: ವಿಷ ಸೇವಿಸಿ ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು, ಅ. 27. ಕುತ್ತಿಗೋಲ್‌ ನಲ್ಲಿ ವಿಷ ಸೇವಿಸಿ ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ಕುತ್ತಿಗೋಲು ಪಂಚಾಯತ್‌ ಸದಸ್ಯ ಜೋಸ್‌ ರವರ ಪತ್ನಿ ಜಿನೋ (35 ವ.) ಎಂದು ಗುರುತಿಸಲಾಗಿದೆ.

 

 

ನಾಲ್ಕು ದಿನಗಳ ಹಿಂದೆ ವಿಷ ಸೇವಿಸಿದ್ದ ಜಿನೋ ರವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಇವರ ಸಾವಿನ ಕೃತ್ಯಕ್ಕೆ ಪತಿ ಹಾಗೂ ಪತಿಯ ಮನೆಯವರು ಕಿರುಕುಳದಿಂದ ಬೇಸತ್ತು ವಿಷ ಸೇವನೆ ಮಾಡಿದ್ದಾಗಿ ಆರೋಪಿಸಿದ್ದಾರೆ. ಜಿನೋ ಅವರ ಸಹೋದರ ಜೋಬಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Also Read  ಏಣಿತಡ್ಕ-2 ಅಂಗನವಾಡಿ ಕಟ್ಟಡ ಉದ್ಘಾಟನೆ ►ಮಕ್ಕಳನ್ನು ದೇಶದ ಆಸ್ತಿಯನ್ನಾಗಿಸಬೇಕು- ಎಸ್.ಅಂಗಾರ

 

error: Content is protected !!
Scroll to Top