(ನ್ಯೂಸ್ ಕಡಬ) newskadaba.com ಸುಳ್ಯ ಅ. 27: ದಿನಕ್ಕೊಂದು ಹೇರ್ ಸ್ಟೈಲ್ ಮಾಡಿಕೊಂಡು, ತಮ್ಮ ಕೇಶವನ್ನು ಹಾಳು ಮಾಡಿಕೊಳ್ಳುವ ಯುವಕರಿಗೆ, ಇಲ್ಲೊಬ್ಬ ಹುಡುಗ ತನ್ನ ಕೇಶದಾನ ಮಾಡುವ ಮೂಲಕ ಮಚ್ಚುಗೆಗೆ ಹಾಗೂ ಹಲವರಿಗೆ ಪ್ರೇರಣೆಯಗಿದ್ದಾನೆ. ಸುಳ್ಯದ ಯುವಕನೊಬ್ಬ ತಾನು ಇಷ್ಟ ಪಟ್ಟು ಅತೀ ಹೆಚ್ಚು ಕೂದಲನ್ನು ಬೆಳೆಸಿಕೊಂಡಿದ್ದಾನೆ. ಬಳಿಕ ಅದನ್ನ ಕ್ಯಾನ್ಸರ್ ಆಸ್ಪತ್ರೆಗೆ ದಾನ ಮಾಡುವ ಮೂಲಕ ಪ್ರಶಂಸೆಗೆ ಪಾತ್ರನಾಗಿದ್ದಾನೆ.
ಇವರು, ಸಾಮಾಜಿಕ ಜಾಲತಾಣದಲ್ಲಿನ “ಹೇರ್ ಫೋರ್ ಹೋಪ್ ಇಂಡಿಯ” ( Hair for hope India) ಎಂಬ ಖಾತೆಯಲ್ಲಿ ಕೂದಲು ದಾನ ಮಾಡುವ ಕುರಿತಂತೆ ಉಲ್ಲೇಖಿಸಲ್ಪಟ್ಟ ಮಾಹಿತಿಯಿಂದ ಪ್ರೇರಣೆಗೊಂಡಿದ್ದಾರೆ.ಇನ್ನು, ಇವರು ಸುಳ್ಯದ ಸಾಹಿತ್ಯ ಸಂಗೀತ ಕಲಾಕೇಂದ್ರದ ಶಿಕ್ಷಕಿ ಶ್ರೀಮತಿ ಆರತಿ ಮತ್ತು ಪುರುಷೋತ್ತಮ ದಂಪತಿಗಳ ಪುತ್ರನಾಗಿರುವ ಶಿಶಿರ್ ರವರು ಮಂಗಳೂರಿನ ಮಹಾಲಸ ಕಾಲೇಜು (Mahalasa college of visual art) ನಲ್ಲಿನ ದ್ವೀತಿಯ ವರ್ಷದ ವಿದ್ಯಾರ್ಥಿಯಾಗಿದ್ದಾರೆ. ಹಲವಾರು ತಿಂಗಳಿಂದ ತಮ್ಮ ಕೂದಲನ್ನು ಬೆಳೆಸಿಕೊಂಡು ಬಳಿಕ ಚೆನ್ನೈನ ಕ್ಯಾನ್ಸರ್ ಆಸ್ಪತ್ರಗೆ ದಾನ ಮಾಡಿದ್ದಾರೆ. ಇವರ ಈ ಮಹತ್ವದ ಕಾರ್ಯ ಯುವಪೀಳಿಗೆಗೆ ಪ್ರೇರಣೆಯಾಗಿದೆ.