ಕಾಸರಗೋಡು: ಅಕ್ರಮ ಚಿನ್ನ ಸಾಗಾಟ ➤ ಓರ್ವನ ಬಂಧನ

(ನ್ಯೂಸ್ ಕಡಬ) newskadaba.com ಕಾಸರಗೋಡು, ಅ. 27. ಟ್ರಾಲಿ ಬ್ಯಾಗ್‌ನ ಟಯರ್‌ನಲ್ಲಿ ಬಚ್ಚಿಟ್ಟು ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಕಾಸರಗೋಡು ನಿವಾಸಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಕಾಸರಗೋಡಿನ ಹಂಝ ಎಂದು ಗುರುತಿಸಲಾಗಿದೆ.

 

 

ಟ್ರಾಲಿ ಬ್ಯಾಗ್‌ನ ಟಯರ್ ನಲ್ಲಿ ಬಚ್ಚಿಟ್ಟು ಚಿನ್ನಾಭರಣವನ್ನು ಸಾಗಿಸುತ್ತಿದ್ದನು. ಕಳೆದ ದಿನ ಸಂಜೆ ದುಬಾಯಿ ಯಿಂದ ಬಂದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಈತ ಬಂದಿಳಿದಿದ್ದನು. ಕಾಸರಗೋಡು ನಿವಾಸಿಯನ್ನು ಕೋಜಿಕ್ಕೋಡ್‌ನ ಕರಿಪ್ಪೂರ್‌ ವಿಮಾನ ನಿಲ್ದಾಣದಿಂದ ಅಧಿಕಾರಿಗಳು ವಶಕ್ಕೆ ತೆಗೆದು ಕೊಂಡಿದ್ದಾರೆ. ಈತನಿಂದ 12. 25 ಲಕ್ಷ ರೂ . ಮೌಲ್ಯದ 245 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

 

 

error: Content is protected !!

Join the Group

Join WhatsApp Group