(ನ್ಯೂಸ್ ಕಡಬ) newskadaba.com ಸುಳ್ಯ, ಅ. 27. ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ಟಿಪ್ಪರ್ ಹಾಗೂ ಚಾಲಕನನ್ನು ಸುಬ್ರಹ್ಮಣ್ಯ ಅರಣ್ಯ ಇಲಾಖೆಯವರು ವಶಪಡಿಸಿದ ಘಟನೆ ಗುತ್ತಿಗಾರು ಎಂಬಲ್ಲಿ ನಡೆದಿದೆ.
ಕಿರಾಲ್ ಬೋಗಿ ಮತ್ತು ಹೆಬ್ಬಲಸು ಮರದ ಸೈಜುಗಳನ್ನು ಟಿಪ್ಪರ್ ನಲ್ಲಿ ಸಾಗಿಸುತ್ತಿದ್ದಾಗ ಗುತ್ತಿಗಾರು ಸಮೀಪ ಶಾಖಾ ಫಾರೆಸ್ಟರ್ ಮನೋಜ್, ಅರಣ್ಯ ರಕ್ಷಕ ಧನಂಜಯ, ವೀರಭದ್ರಯ್ಯ ಕರಣೀಮಠ, ಅರಣ್ಯ ವೀಕ್ಷಕ ಬಸಪ್ಪ ಮೊದಲಾದವರು ಸೇರಿ ತಡೆಹಿಡಿದ್ದರು. ಮರ ಸಾಗಾಟಕ್ಕೆ ಯಾವುದೇ ದಾಖಲೆಗಳು ಇರದ ಕಾರಣ ಮರ, ವಾಹನ ಮತ್ತು ಚಾಲಕನನ್ನು ವಶಕ್ಕೆ ಪಡೆದು ವಲಯಾರಣ್ಯಾಧಿಕಾರಿ ಎದುರು ಹಾಜರುಪಡಿಸಿ ಚಾಲಕನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಡಿಸಿಎಫ್ ಕರಿಕಲನ್, ಎಸಿಎಫ್ ಆಸ್ಟಿನ್, ಆರ್ ಎಫ್ ಒ ರಾಘವೇಂದ್ರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು.