ಮನೆಗೆ ಸೋಡಾ ಬಾಟಲಿ ಎಸೆತ, ಕಿಟಕಿ ಗಾಜಿಗೆ ಹಾನಿ ➤ ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ

(ನ್ಯೂಸ್ ಕಡಬ) newskadaba.com ಗಂಗೊಳ್ಳಿ, ಅ.26. ಇಲ್ಲಿನ ಜಾಮೀಯ ಮಸೀದಿ ಸಮೀಪದ ಮನೆಯೊಂದಕ್ಕೆ ಕಳೆದ ದಿನ ರಾತ್ರಿ 11ಗಂಟೆ ಸುಮಾರಿಗೆ ಕಿಡಿಗೇಡಿಗಳು ಸೋಡಾ ಬಾಟಲಿ ಎಸೆದು ಕಿಟಕಿ ಗಾಜುಗಳನ್ನು ಪುಡಿಗೈದಿರುವ ಬಗ್ಗೆ ವರದಿಯಾಗಿದೆ. ಬಂಧಿತ ಆರೋಪಿಗಳನ್ನು ಗಂಗೊಳ್ಳಿ ದಾಕುಹಿತ್ಲುವಿನ ಧನುಷ್(22), ಕಿರಣ್(23) ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿ ನಿಖಿಲ್ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.

 

 

 

ಇವರು ರಾತ್ರಿ ಬೈಕಿನಲ್ಲಿ ಬಂದು ಇಫ್ತಿಕಾರ್ ಅಹ್ಮದ್ ಎಂಬವರ ಮನೆಗೆ ಸೋಡಾ ಬಾಟಲಿ ಎಸೆದಿದ್ದು, ಇದರಿಂದ ಕಿಟಕಿ ಗಾಜುಗಳು ಪುಡಿಯಾಗಿವೆ. ಮನೆಯಿಂದ ಹೊರಗಡೆ ಬಂದ ಇಫ್ತಿಕಾರ್ ಆರೋಪಿಗಳನ್ನು ಗುರುತಿಸಿದ್ದು, ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿ  ಇಂದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Also Read  ಎಸ್ಡಿಪಿಐ ಆತೂರು ವಲಯ ವತಿಯಿಂದ ಬಿಜೆಪಿ ಸರಕಾರದ ರೈತ ವಿರೋಧಿ ಸುಗ್ರೀವಾಜ್ಞೆಗಳ ವಿರುದ್ದ ಪ್ರತಿಭಟನೆ

 

error: Content is protected !!
Scroll to Top