ಹೆತ್ತವರ ಕಣ್ಣೆದುರಲ್ಲೇ ನದಿಗೆ ಜಿಗಿದು ಯುವತಿ ಆತ್ಮಹತ್ಯೆ!

(ನ್ಯೂಸ್ ಕಡಬ) newskadaba.com ವಿಜಯಪುರ . 26: ಯುವತಿಯೊಬ್ಬಳು ಹೆತ್ತವರ ಕಣ್ಣೆದ್ದುರಲ್ಲೇ ಭೀಮಾ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ವಿಜಯಪುರದಲ್ಲಿ ಭಾನುವಾರ (ಅ.25) ನಡೆದಿದೆ. ಐಶ್ವರ್ಯ ಶ್ರೀಪಾಲ ಕಬ್ಬಿನ (20) ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ಧಾರವಾಡದ ನವಲಗುಂದ ಪಟ್ಟಣದ ನಿವಾಸಿ. ಕುಟುಂಬಸ್ಥರೊಂದಿಗೆ ಗಾಣಗಾಪುರ ದತ್ತಾತ್ರೆಯ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ.

ಮಾರ್ಗ ಮಧ್ಯೆ ವಿಜಯಪುರದ ಆಲಮೇಲ ಮತ್ತು ಕಲಬುರಗಿ ಜಿಲ್ಲೆಯ  ಅಫಜಲಪುರ ತಾಲೂಕು ನಡುವೆ ಭೀಮಾನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಸೇತುವೆ ಬಳಿ ವಾಹನ ನಿಲ್ಲಿಸುವಂತೆ ಐಶ್ವರ್ಯಾ ಕೇಳಿದ್ದಾಳೆ. ಬಳಿಕ ನದಿಗೆ ನಾಣ್ಯ ಹಾಕಬೇಕೆಂದು ಹೇಳಿ ವಾಹನ ಇಳಿದು ಸೇತುವೆಯ ಅಂಚಿಗೆ ಹೋಗಿ, ಮೇಲಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಆತ್ಮಹತ್ಯೆಗೆ ನಿಖರ ಕಾರಣ ಏನೆಂದು ತಿಳಿದುಬಂದಿಲ್ಲ.

Also Read  ಅನ್ನಭಾಗ್ಯ ಅಕ್ಕಿಯ ಬದಲಾಗಿ ಜುಲೈ ತಿಂಗಳಿಂದಲೇ ಹಣ ವಿತರಣೆ

 

error: Content is protected !!
Scroll to Top