ಸಂಪಾಜೆ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಮಿತಿ ಸಭೆ

(ನ್ಯೂಸ್ ಕಡಬ) newskadaba.com ಸಂಪಾಜೆ, ಅ. 26. ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಸಂಪಾಜೆ ವಲಯ ಅಧ್ಯಕ್ಷ ರಾದ ಸೋಮಶೇಖರ ಕೈೂಂಗಾಜೆ ರವರ ಅಧ್ಯಕ್ಷತೆಯಲ್ಲಿ ಸಂಪಾಜೆ ವ್ಯವಸಾಯ ಕೃಷಿ ಪತ್ತಿನ ಸಹಕಾರಿ ಸಂಘದ ಸಮನ್ವಯ ಸಭಾಭವನದಲ್ಲಆದಿತ್ಯವಾರದಂದು ನಡೆಯಿತು.

ಸಭೆಯಲ್ಲಿ ಪಕ್ಷ ಸಂಘಟನೆ ಗ್ರಾಮ ಪಂಚಾಯತ್ ಚುನಾವಣಾ ಸಿದ್ದತೆ ಬಗ್ಗೆ ಚರ್ಚಿಸಿ ಐದು ವಾರ್ಡ್ ಗಳಿಗೆ ಸಮಿತಿ ನೇಮಕ ಮಾಡಿ ಸಮಿತಿಯು ಪ್ರತಿ ವಾರ್ಡ್ ನಲ್ಲಿ ಅಯಾ ವಾರ್ಡ್ ಮತದಾರರ ಅಭಿಪ್ರಾಯ ಪಡೆದು ವಲಯ ಸಮಿತಿಗೆ ಸಲ್ಲಿಸುವುದು. ಅಭ್ಯರ್ಥಿಯನ್ನು ವಲಯ ಸಮಿತಿಯವರು ಆಯ್ಕೆ ಮಾಡಲಾಗುವುದು. ಸಭೆಯಲ್ಲಿ ಹಲವು ಸಾರ್ವಜನಿಕ ಸಮಸ್ಯೆ ಬಗ್ಗೆ ಚರ್ಚಿಸಲಾಯಿತು. ಕೆಪಿಸಿಸಿ ಮಾಧ್ಯಮ ವಕ್ತಾರರಾದ ಶೌವಾದ್ ಗೂನಡ್ಕ ರವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮಹಮ್ಮದ್ ಕುಂಞ ಗೂನಡ್ಕ, ಯಮುನಾ ಸಂಪಾಜೆ, ಸುಂದರಿ ಮುಂಡಡ್ಕ ಮುಂತಾದವರು ಉಪಸ್ಥಿತರಿದ್ದರ. ಕಾಂಗ್ರೆಸ್ ಕಾರ್ಯಕರ್ತರು ಗ್ರಾಮ ಪಂಚಾಯತ್ ಮಾಜಿ ಸದಸ್ಯರು ಸಹಕಾರಿ ಸಂಘದ ನೀರ್ದೇಶಕರು ಸೇರಿದಂತೆ ಮುಂತಾದವರು ಭಾಗವಹಿಸಿದ್ದರು. ಹಮೀದ್ ಸ್ವಾಗತಿಸಿ, ಅಬೂಸಾಲಿ ವಂದಿಸಿದರು.

Also Read  ಕೊರಿಯರ್ ಶಾಪ್ ಗೆ ಪಾರ್ಸೆಲ್ ಗೆ ಬಂದಿದ್ದ ಮಿಕ್ಸಿ ಬ್ಲಾಸ್ಟ್   ➤ ಮಾಲಿಕನಿಗೆ ಗಂಭೀರ ಗಾಯ                    

error: Content is protected !!
Scroll to Top