ಗಂಟಲಲ್ಲಿ ಗೋಲಿಬಜೆ ಸಿಲುಕಿ ವ್ಯಕ್ತಿ ಮೃತ್ಯು



(ನ್ಯೂಸ್ ಕಡಬ) newskadaba.com ಮಂಗಳೂರು, ಅ. 25. ಗಂಟಲಲ್ಲಿ ಗೋಲಿಬಜೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳಚಿಕಂಬಳ ಎಂಬಲ್ಲಿ ಸಂಭವಿಸಿದೆ.





ಮೃತರನ್ನು ಹರೀಶ ರಾಮಪ್ಪ ಅಮೀನ್ (55) ಎಂದು ಗುರುತಿಸಲಾಗಿದೆ. ಪಡುಬಿದ್ರಿಯಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಇವರ ಪತ್ನಿ, ಮಗ ಮುಂಬೈಯಲ್ಲಿ ನೆಲೆಸಿದ್ದು, ಆಗಾಗ ಬಂದುಹೋಗುತ್ತಿದ್ದರು ಎನ್ನಲಾಗಿದೆ. ಸದ್ಯ ಇವರು ಮುಲ್ಕಿ ಕೊಳಚಿಕಂಬಳ ಎಂಬಲ್ಲಿ ಸಹೋದರಿಯ ಜೊತೆ ವಾಸವಾಗಿದ್ದರು.






ಕೆಲ ದಿನಗಳ ಹಿಂದೆ ಅವರ ಪತ್ನಿ ಹಾಗೂ ಮಗ ಮುಂಬೈನಿಂದ ಬಂದಿದ್ದು, ಮನೆಯೊಳಗೆ ಭಾರೀ ಜಗಳ ನಡೆದಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪಡುಬಿದ್ರಿಯಿಂದ ಕೂಲಿ ಕೆಲಸ ಮುಗಿಸಿ ಮನೆಗೆ ಬರುವಾಗ ಹೋಟೆಲ್ ನಿಂದ ಗೋಲಿಬಜೆ ತಂದಿದ್ದು, ಇದನ್ನು ತಿನ್ನುವ ವೇಳೆ ಗಂಟಲಿನಲ್ಲಿ ಸಿಲುಕಿದ್ದು, ತಕ್ಷಣ ಸ್ಥಳೀಯ ರಿಕ್ಷಾ ಚಾಲಕರೊರ್ವರು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top