ಪುಷ್ಪರಥದ ಬದಲು ಚಿನ್ನದ ರಥದಲ್ಲಿ ಮೂಕಾಂಬಿಕೆಯ ಉತ್ಸವ ➤ ಅರ್ಚಕರಲ್ಲಿ ಹಾಗೂ ಭಕ್ತರಲ್ಲಿ ಅಸಮಾಧಾನ

(ನ್ಯೂಸ್ ಕಡಬ) newskadaba.com ಉಡುಪಿ . 25: ಕೊಲ್ಲೂರು ಮೂಕಾಂಬಿಕಾ ಸನ್ನಿಧಾನದಲ್ಲಿ ನವಮಿಯಂದು ನಡೆದ ಮಹಾರಥೋತ್ಸವ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.  ಪುಷ್ಪಾಲಂಕೃತ ಮರದ ರಥದ ಬದಲು ಚಿನ್ನದ ರಥವನ್ನು ಉತ್ಸವಕ್ಕೆ ಬಳಸಿದ್ದು ಇದಕ್ಕೆ ಕಾರಣ.ಕೊಲ್ಲೂರಲ್ಲಿ ನವಮಿಗೆ ಪ್ರತಿವರ್ಷ ಉತ್ಸವಮೂರ್ತಿಯನ್ನು ಮರದ ಪುಷ್ಪಾಲಂಕೃತ ರಥದಲ್ಲಿಟ್ಟು ದೇಗುಲದ ಪ್ರಾಂಗಣದಲ್ಲಿ ಮೆರವಣಿಗೆ ಮಾಡಲಾಗುತ್ತದೆ.

ಆದರೆ ಈ ಬಾರಿ ಚಿನ್ನದ ರಥದಲ್ಲಿಟ್ಟು ಮೂಕಾಂಬಿಕಾ ದೇವಿಯ ರಥೋತ್ಸವ ಮಾಡಲಾಗಿದೆ. ಇದು ಕೆಲ ಅರ್ಚಕರಿಗೆ ಅಸಮಾಧಾನ ತಂದಿದೆ. ಅಲ್ಲದೆ ಕೆಲ ಭಕ್ತರೂ ಇದಕ್ಕೆ ದನಿಗೂಡಿಸಿದ್ದಾರೆ.ಹತ್ತು ವರ್ಷದ ಹಿಂದೆ ಬಿ.ಎಂ ಸುಕುಮಾರ್ ಶೆಟ್ಟಿ ದೇವಸ್ಥಾನಕ್ಕೆ ಚಿನ್ನವನ್ನು ಸಮರ್ಪಿಸಿದ್ದರು ಹೀಗಾಗಿ ಅಂದು ಸಮರ್ಪಿಸಲಾದ ಚಿನ್ನದ ರಥವನ್ನು ನವರಾತ್ರಿ ಉತ್ಸವಕ್ಕೆ ಬಳಸಿ ಎಂದು ಹೇಳಿದ್ದಾರಂತೆ. ಹೀಗಾಗಿ ಸಿದ್ಧವಾದ ಮರದ ರಥ ಪಕ್ಕಕ್ಕಿಟ್ಟು ಚಿನ್ನದ ರಥದಲ್ಲಿ ದೇವಿಯ ಮೆರವಣಿಗೆ ಆಗಿದೆ. ಈ ಬೆಳವಣಿಗೆ ಅರ್ಚಕರಲ್ಲಿ ಹಾಗೂ ಭಕ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ

Also Read  Казино Vodka | Выигрывайте здесь, играть бесплатно в слоты

 

 

error: Content is protected !!
Scroll to Top