ವೈವಿಧ್ಯಮಯ ಅಲಂಕಾರಗಳಿಂದ ಕಂಗೊಳಿಸುತ್ತಿರುವ ‘ಮಂಗಳೂರು ದಸರಾ’

(ನ್ಯೂಸ್ ಕಡಬ) ಮಂಗಳೂರು, ಅ. 25. ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ಹೊರತುಪಡಿಸಿದರೆ ಮಂಗಳೂರು ಹೆಸರಿನಲ್ಲಿ ನವರಾತ್ರಿ ಉತ್ಸವ ಅತ್ಯಂತ ವೈಭವಯುತವಾಗಿ ನಡೆಯುವುದು ಮಂಗಳೂರಿನಲ್ಲಿ. ಕುದ್ರೋಳಿ ಶ್ರೀ ಗೋಕರ್ಣಾಥೇಶ್ವರ ದೇವಸ್ಥಾನದ ನೇತೃತ್ವದಲ್ಲಿ ಈ ಉತ್ಸವ ನಡೆಯುವುದಾದರೂ ಕರಾವಳಿಯ ಸಮಸ್ತ ಸಮಾಜ ಇದರಲ್ಲಿ ಕೈಜೋಡಿಸುವುದು ವಿಶೇಷ.

ವಿದ್ಯುತ್ ದೀಪಾಲಂಕಾರ ನಾಲ್ಕು  ದಿಕ್ಕುಗಳಿಂದಲೂ ಕೇಳುವ ಹುಲಿಕುಣಿತದ ತಾಸೆ ಪೆಟ್ಟು ಉತ್ಸವದುದ್ದಕ್ಕೂ ನಗರವನ್ನು ಹಬ್ಬದ ಮನೆಯಂತಹ ವಾತಾವರಣ ನಿರ್ಮಾಣ ಮಾಡುತ್ತದೆ. ಕುದ್ರೋಳಿ ಕ್ಷೇತ್ರವಲ್ಲದೇ ಸಾಂಪ್ರದಾಯಿಕ ಆಚರಣೆಗಳಿಂದ ಮಹತೋಬಾರ ಶ್ರಿ ಮಂಗಳಾದೇವಿ, ರಥಬೀದಿ ಶ್ರಿ ವೆಂಕಟರಮಣ ದೇವಸ್ಥಾನಗಳು ಪ್ರಸಿದ್ದಿ ಪಡೆದಿವೆ.

Also Read  ರಾಮಕುಂಜ: ಪಶುಸಂಗೋಪನಾ ಸಚಿವರಿಂದ ಗೋಶಾಲೆಗೆ ಶಂಕುಸ್ಥಾಪನೆ ➤ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಗೋಶಾಲೆ ಆರಂಭ- ಸಚಿವ ಪ್ರಭು ಚೌವ್ಹಾನ್

error: Content is protected !!
Scroll to Top