ಸ್ಯಾಂಡಲ್ ವುಡ್ ಹಿರಿಯ ನಿರ್ಮಾಪಕ ಹೆಚ್‍.ಕೆ. ಶ್ರೀನಿವಾಸ್ ವಿಧಿವಶ

(ನ್ಯೂಸ್ ಕಡಬ) newskadaba.com ಬೆಂಗಳೂರು . 25: ನಿರ್ಮಾಪಕ ಹೆಚ್. ಕೆ ಶ್ರೀನಿವಾಸ್ ವಿಧಿವಶರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಇಬ್ಬರು ಮಕ್ಕಳು ಮತ್ತು ಪತ್ನಿಯನ್ನು ಅಗಲಿದ್ದಾರೆ. ಅನಾರೋಗ್ಯದ ಕಾರಣ ರಂಗದೊರೆ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀನಿವಾಸ್ ಹೃದಯಾಘಾತದಿಂದ ಕಳೆದ ದಿನ ನಿಧನ ಹೊಂದಿದ್ದಾರೆ.

“ಮಾಯಾ ಮುಸುಕು”, “ಗುಂಡನ ಮದುವೆ”, “ಪಟ್ಟಣಕ್ಕೆ ಬಂದ ಪುಟ್ಟ”, “ಚಂದನ ಚಿಗುರು”, “ಕರುನಾಡು” ಮತ್ತು “ಗುರುಕುಲ” ಚಿತ್ರಗಳ ನಿರ್ಮಾಪಕಾರಾಗಿದ್ದ ಶ್ರೀನಿವಾಸ್ ಅವರ “ಗುರುಕುಲ” ಚಿತ್ರಕ್ಕೆ ಅತ್ಯುತ್ತಮ ಮಕ್ಕಳ ಚಿತ್ರ ರಾಜ್ಯ ಪ್ರಶಸ್ತಿ ಲಭಿಸಿತ್ತು. ಶ್ರೀನಿವಾಸ್ ಅವರ ಅಂತ್ಯಕ್ರಿಯೆ ಇಂದೇ ನೆರವೇರಲಿದೆ ಎಂದು ಕುಟುಂಬ ಮೂಲಗಳು ಹೇಳಿದೆ.

Also Read  ರೇಣುಕಾಸ್ವಾಮಿ ಕೊಲೆ ಪ್ರಕರಣ ಸೆ.30ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

 

error: Content is protected !!
Scroll to Top