ಸೌತೆಕಾಯಿ ಪಾಯಸ ಮಾಡುವ ವಿಧಾನ

(ನ್ಯೂಸ್ ಕಡಬ) newskadaba.com ಸೌತೆಕಾಯಿಯಿಂದ ಸಾಂಬಾರ್, ದೋಸಾ, ಸಲಾಡ್ ಮಾಡಿ ತಿಂದಿರಬಹುದು. ಹಾಗೆಯೇ ಸೌತೆಕಾಯಿಯಿಂದ ಪಾಯಸ ಕೂಡ ಮಾಡಬಹುದು.

ಸೌತೆಕಾಯಿ ಪಾಯಸ ಮಾಡಲು ಬೇಕಾಗುವ ಪದಾರ್ಥಗಳು:

2 ಬಲಿತ ಸೌತೆಕಾಯಿ

½ ಕಪ್ ಬೆಲ್ಲ

¼ ಲೋಟ ಸಕ್ಕರೆ

½ ಬಟ್ಟಲು ತೆಂಗಿನ ತುರಿ

1 ಕಪ್ ಹಾಲು

1 ಚಮಚ ನೆನೆಸಿಟ್ಟ ಅಕ್ಕಿ

1 ಚಮಚ ಗಸಗಸೆ

4-5 ಏಲಕ್ಕಿ, ಲವಂಗ

ಸ್ವಲ್ಪ ದ್ರಾಕ್ಷಿ, ಗೋಡಂಬಿ

 

ಸೌತೆಕಾಯಿ ಪಾಯಸ ಮಾಡುವ ವಿಧಾನ :

ಮೊದಲು ಸೌತೆಕಾಯಿಯ ತಿರುಳು ಹಾಗೂ ಬೀಜಗಳನ್ನು ತೆಗೆದು ಸಣ್ಣ ಹೋಳುಗಳನ್ನಾಗಿ ಮಾಡಿ ನೀರಿನಲ್ಲಿ ಬೇಯಿಸಿಕೊಳ್ಳಿ. ನಂತರ ತೆಂಗಿನ ತುರಿ, ಅಕ್ಕಿ, ಗಸಗಸೆ, ಏಲಕ್ಕಿ, ಲವಂಗ ಎಲ್ಲವನ್ನೂ ನುಣ್ಣಗೆ ಮಿಕ್ಸ್ ಮಾಡಿ, ಅದನ್ನು ಮೊದಲೇ ಬೆಂದ ಸೌತೆಕಾಯಿಗೆ ಸೇರಿಸಿ. ಬೆಲ್ಲ ಹಾಕಿ ಚೆನ್ನಾಗಿ ಕುದಿಸಿದ ಮೇಲೆ ಕೆಳಗಿಳಿಸಿ ಹಾಲು, ತುಪ್ಪದಲ್ಲಿ ಕರಿದ ದ್ರಾಕ್ಷಿ ಹಾಗೂ ಗೋಡಂಬಿಯನ್ನು ಸೇರಿಸಿ ಸವಿಯಿರಿ.

Also Read  ಈ 8 ರಾಶಿಯವರಿಗೆ ಧನಪ್ರಾಪ್ತಿ ಯೋಗ, ದಾಂಪತ್ಯದಲ್ಲಿ ಹೊಂದಾಣಿಕೆ ಯಾವುದೇ ಸಮಸ್ಯೆ ಇದ್ದರೂ ಪರಿಹಾರವಾಗುತ್ತದೆ

error: Content is protected !!
Scroll to Top