ಮಹಾನವಮಿಯ ಶುಭಾಶಯ ಕೋರಿದ ಪ್ರಧಾನಿ ಮೋದಿ

(ನ್ಯೂಸ್ ಕಡಬ) newskadaba.com ನವದೆಹಲಿ . 25: ನವರಾತ್ರಿಯ ಒಂಬತ್ತನೇ ದಿನದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಗೆ ಮಹಾನವಮಿಯ ಶುಭಾಶಯ ಕೋರಿದ್ದಾರೆ.

ನವರಾತ್ರಿಯ ಶುಭ ಸಂದರ್ಭದಲ್ಲಿ ದೇಶದ ಜನತೆಗೆ ಮಹಾನವಮಿಯ ಶುಭಾಶಯಗಳು. ನವರಾತ್ರಿಯಲ್ಲಿ ದುರ್ಗಾದೇವಿಯ 9ನೇ ರೂಪವಾಗಿರುವ ಸಿದ್ಧಿದಾತ್ರಿಯನ್ನು ಪೂಜಿಸಲಾಗುತ್ತದೆ. ಮಾತೆ ಸಿದ್ಧಿದಾತ್ರಿಯ ಆಶೀರ್ವಾದದಿಂದ ಎಲ್ಲರಿಗೂ ಅವರ ಕಾರ್ಯಗಳಲ್ಲಿ ಯಶಸ್ಸು ಸಿಗಲಿ ಎಂಬುದಾಗಿ ಪ್ರಧಾನಿ ಮೋದಿ ಶುಭ ಹಾರೈಸಿದ್ದಾರೆ.

error: Content is protected !!
Scroll to Top