(ನ್ಯೂಸ್ ಕಡಬ) newskadaba.comಸೌದಿ ಅರೇಬಿಯ, ಅ. 25.ವಿದೇಶಿ ಉಮ್ರಾ ಯಾತ್ರಿಕರನ್ನು ಸ್ವಾಗತಿಸಲು ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವಾಲಯವು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.
ದೇಶದ ನಾಗರಿಕರು ಮತ್ತು ದೇಶದಲ್ಲೇ ವಾಸಿಸುತ್ತಿರುವ ವಲಸಿಗರಿಗಾಗಿ ಯಶಸ್ವಿ ಯಾತ್ರೆಯನ್ನು ಏರ್ಪಡಿಸಿದ ಬಳಿಕ, ವಿದೇಶಿಯರ ಆಗಮನಕ್ಕೆ ಅನುಮತಿ ನೀಡುವ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಂಡಿದೆ ತಿಳಿಸಿದೆ. ವಿದೇಶಿ ಯಾತ್ರಿಕರನ್ನು ಸ್ವಾಗತಿಸಲು 700ಕ್ಕೂ ಅಧಿಕ ಉಮ್ರಾ ಕಂಪೆನಿಗಳು ಸಿದ್ಧವಾಗಿವೆ ಎಂದು ಹಜ್ ಮತ್ತು ಉಮ್ರಾ ವ್ಯವಹಾರಗಳ ಸಹಾಯಕ ಸಚಿವ ಅಬ್ದುಲ್ ರಹ್ಮಾನ್ ಶಾಮ್ಸ್ ತಿಳಿಸಿದ್ದಾರೆ. ಈವರೆಗೆ ಸುಮಾರು 1.20 ಲಕ್ಷ ಯಾತ್ರಿಕರು ಉಮ್ರಾ ಯಾತ್ರೆ ಮಾಡಿದ್ದು, ಅಕ್ಟೋಬರ್ 18ರಿಂದ ಆರಂಭವಾಗಿರುವ ಎರಡನೇ ಹಂತದ ಉಮ್ರಾ ಯಾತ್ರೆಯ ಅವಧಿಯಲ್ಲಿ ಈವರೆಗೆ 45,000 ಮಂದಿ ಮಕ್ಕಾದ ಪ್ರಧಾನ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ವಿದೇಶಿ ಯಾತ್ರಿಕರು ಉಮ್ರಾದಲ್ಲಿ ತಮ್ಮ ಸ್ಥಾನವನ್ನು ನೋಂದಾಯಿತ ಕಂಪೆನಿಗಳ ಮೂಲಕ ಕಾಯ್ದಿರಿಸಬೇಕಾಗಿದೆ. ಅದೂ ಅಲ್ಲದೆ, ವಿದೇಶೀಯರು ಗುಂಪುಗಳಲ್ಲಿ ಬರಬೇಕು ಹಾಗೂ ಒಬ್ಬೊಬ್ಬರಾಗಿ ಬರುವಂತಿಲ್ಲ ಎಂದೂ ಸಚಿವರು ತಿಳಿಸಿದ್ದಾರೆ.