(ನ್ಯೂಸ್ ಕಡಬ) newskadaba.com ಬೆಂಗಳೂರು ಅ. 25: ಸಂಚಾರಿ ಪೊಲೀಸ್ರು ಅಪಘಾತ ಪ್ರಕರಣಗಳನ್ನ ಕಡಿಮೆ ಮಾಡಲು ಸಾಕಷ್ಟು ಪ್ರಯತ್ನಗಳನ್ನ ನಡೆಸುತ್ತಲೆ ಇದ್ದಾರೆ. ಹೀಗಾಗಿ ಸಂಚಾರಿ ಅಂಥವ್ರಿಗೆ ಕಠಿಣ ಎಚ್ಚರಿಕೆ ನೀಡಲು ಭದ್ರತಾ ಕಾಲಂ107 ಬಳಸಲು ಇಲಾಖೆ ಮುಂದಾಗಿದೆ. ಸಂಚಾರಿ ನಿಯಮ ಪಾಲನೆ ಮಾಡದೆ, ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದರೆ ಎರಡು ಲಕ್ಷ ಬಾಂಡ್ ಬರೆದುಕೊಡಬೇಕು.
ಅಷ್ಟೇ ಅಲ್ಲಾ ಎಲ್ಲಾ ದಾಖಲೆಗಳನ್ನ ಕೊಟ್ಟು, ಪೋಷಕರೂ ಬಂದು ಮುಚ್ಚಳಿಕೆ ಬರೆದುಕೊಡಬೇಕು.ಇದುವರೆಗೂ ಇಂಥ 14 ಕೇಸ್ಗಳನ್ನ ದಾಖಲಿಸಲಾಗಿದೆ. ಇನ್ನು ಕರ್ಕಶ ಶಬ್ದ ಸೈಲೆನ್ಸರ್ ಬಳಸಿದರೂ ಐವತ್ತು ಸಾವಿರ ರೂ ಬಾಂಡ್ ಬರೆದುಕೊಡಬೇಕು. ಆರು ತಿಂಗಳ ಅವಧಿಯಲ್ಲಿ ಸಂಚಾರಿ ನಿಮಯ ಪಾಲಿಸುವುದಾಗಿ ಬಾಂಡ್ ಬರೆದುಕೊಡಬೇಕು. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದ್ರೆ ಎರಡು ಲಕ್ಷ ರೂ ದಂಡ ಕಟ್ಟಿಕೊಡುವುದರ ಜೊತೆಗೆ ಜೈಲು ಫಿಕ್ಸ್. ಆಯಾ ಠಾಣಾ ವ್ಯಾಪ್ತಿಯ ಲಾ ಅಂಡ್ ಆರ್ಡರ್ ಡಿಸಿಪಿ ಕ್ರಮ ಕೈಗೊಳ್ಳುತ್ತಾರೆ.
ಭದ್ರತಾ ಬಾಂಡ್ ಕೇಸ್ ಆದ್ರೆ ವೀಸಾ ಪಾಸ್ ಪೋರ್ಟ್ ಮತ್ತು ಭವಿಷ್ಯಕ್ಕೆ ಪೆಟ್ಟು ಎಂದು ಸಂಚಾರಿ ವಿಭಾಗದ ಮುಖ್ಯಸ್ಥ ರವಿಕಾಂತೇಗೌಡ ತಿಳಿಸಿದ್ದಾರೆ.ಇನ್ನು 18 ವರ್ಷದ ಒಳಗಿನ ಮಕ್ಕಳು ರೂಲ್ಸ್ ಬ್ರೇಕ್ ಮಾಡಿದ್ರೆ ಪೋಷಕರ ಮೇಲೆ ಕೇಸ್ ಬೀಳಲಿದೆ. ಹೀಗೆ ಕರ್ಕಶ ಶಬ್ದದ ಸೈಲನ್ಸರ್ ಹಾಕುವ ಗ್ಯಾರೇಜ್ ಮಾಲೀಕರಿಗೂ ಎಚ್ಚರಿಕೆ ನೀಡಲಾಗಿದೆ.