ಕಾಸರಗೋಡು: ವಿದ್ಯುತ್ ಸ್ಪರ್ಶದಿಂದ ಕೃಷಿಕ ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು, ಅ.24: ಪೈವಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಳ್ಳೂರು ನಾರ್ಲಗುಳಿಯಲ್ಲಿ ವಿದ್ಯುತ್ ಸ್ಪರ್ಶದಿಂದ ಕೃಷಿಕರೋರ್ವರು ಮೃತಪಟ್ಟ ಘಟನೆ ನಡೆದಿದೆ.

 

ಮೃತಪಟ್ಟ ವ್ಯಕ್ತಿಯನ್ನು ರಫಾಯಲ್ ಡಿ ಸೋಜ ( 49) ಎಂದು ಗುರುತಿಸಲಾಗಿದೆ. ರಫಾಯಲ್ ರವರ ಕೃಷಿ ಸ್ಥಳಕ್ಕೆ ಕಾಡು ಹಂದಿಗಳು ನಿರಂತರ ದಾಳಿ ನಡೆಸುತ್ತಿದ್ದು, ಭಾರೀ ಪ್ರಮಾಣದ ಬೆಳೆಗಳು ಹಾನಿಗೊಂಡಿದ್ದವು. ಇದರಿಂದ ಭತ್ತ ಕೃಷಿಗೆ ಕಾಡು ಹಂದಿಗಳ ಉಪಟಳ ತಡೆಯಲು ತಂತಿಯ ಬೇಲಿ ಅಳವಡಿಸಿ ವಿದ್ಯುತ್ ಪ್ರವಹಿಸಲಾಗಿತ್ತು. ರಾತ್ರಿ ಹಂದಿಯ ಶಬ್ದ ಕೇಳಿ ಗದ್ದೆಯ ಕಡೆಗೆ ತೆರಳಿದ್ದ ಸಂದರ್ಭದಲ್ಲಿ ಅವರಿಗೆ ವಿದ್ಯುತ್ ಶಾಕ್ ತಗುಲಿದೆ. ಬೊಬ್ಬೆ ಕೇಳಿ ನೆರೆಮನೆಯವರು ಗಮನಿಸಿದಾಗ ರಫಾಯಲ್ ರವರು ಶಾಕ್ ತಗಲಿ ಬಿದ್ದಿರುವುದು ಕಂಡು ಬಂದಿದೆ. ಬಳಿಕ ಮಂಜೇಶ್ವರ ಪೊಲೀಸ್ ಠಾಣೆ ಗೆ ಮಾಹಿತಿ ನೀಡಲಾಯಿತು. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಉಪ್ಪಳ ಅಗ್ನಿಶಾಮಕ ದಳದ ಸಹಾಯಕ ಅಧಿಕಾರಿ ಎ. ಟಿ ಜೋರ್ಜ್ ನೇತೃತ್ವದ ತಂಡವು ತಂತಿಯನ್ನು ತುಂಡರಿಸಿ ಮೃತದೇಹವನ್ನು ಹೊರತೆಗೆದು, ಮಂಜೇಶ್ವರ ಠಾಣಾ ಪೊಲೀಸರು ಮಹಜರು ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತು.

Also Read  ’ಕಾಂಗ್ರೆಸ್ಸಿನವರದು ಸರಕಾರಿ ಪ್ರಾಯೋಜಿತ ಭಯೋತ್ಪಾದನೆಯೇ- ಸರಕಾರಿ ಪ್ರಾಯೋಜಿತ ಬೆದರಿಕೆಯೇ’        ಸಿ.ಟಿ. ರವಿ ಪ್ರಶ್ನೆ

 

error: Content is protected !!
Scroll to Top