ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದ ರಿಲಯನ್ಸ್ ಜಿಯೋ..!

(ನ್ಯೂಸ್ ಕಡಬ) newskadaba.com ನವದೆಹಲಿ, ಅ.24: ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದ ರಿಲಯನ್ಸ್ ಜಿಯೋ ವತಿಯಿಂದ ಮೇಡ್ ಇನ್ ಇಂಡಿಯಾ ಎಂಬ ವಿಶೇಷತೆಯನ್ನು ಬ್ರೌಸರ್ ಹೊಂದಿದ್ದು ವೆಬ್ ಸುರಕ್ಷತೆ, ಡೇಟಾ, ಗೌಪ್ಯತೆಗೆ ಒತ್ತು ನೀಡಲು ಹೊಸ ಜಿಯೋ ಪೇಜಸ್ ಎನ್ನುವ ಬ್ರೌಸರ್ ಬಿಡುಗಡೆ ಮಾಡಲಾಗಿದೆ ಎಂದು ಹೇಳಲಾಗಿದೆ.

 

ಗುಣಮಟ್ಟ ವರ್ಧಿತ ಬ್ರೌಸಿಂಗ್ ಅನುಭವವನ್ನು ಜಿಯೋ ಬ್ರೌಸಿಂಗ್ ಬಳಕೆದಾರರಿಗೆ ಒದಗಿಸುತ್ತದೆ. ಭಾರತ ನಿರ್ಮಿತ ಬ್ರೌಸರ್ ಇರಲಿಲ್ಲ ಎನ್ನುವ ಕೊರತೆಯನ್ನು ಇದು ನೀಗಿಸಿದೆ. ವೇಗವಾದ ಸರ್ಚ್ ಇಂಜಿನ್, ಅತ್ಯುತ್ತಮ ಇನ್ ಕ್ಲಾಸ್ ವೆಬ್ ಪುಟ ರೆಂಡರಿಂಗ್, ವೇಗದ ಪೇಜ್ ಲೋಡ್ ಗಳು, ಮೀಡಿಯಾ ಸ್ಟ್ರೀನಿಂಗ್, ಎಮೋಜಿ ಡೊಮೇನ್, ಎನ್ ಕ್ರಿಪ್ಟ್ ಮಾಡಿದ ಸಂಪರ್ಕದ ಮೂಲಕ ಬಳಕೆದಾರರಿಗೆ ಗುಣಮಟ್ಟದ ಬ್ರೌಸಿಂಗ್ ಅನುಭವ ಒದಗಿಸುತ್ತದೆ ಎಂದು ಹೇಳಲಾಗಿದೆ.

Also Read  ಪಲ್ಸ್ ಪೊಲಿಯೋ ಕಾರ್ಯಕ್ರಮ ಜ.31ಕ್ಕೆ ಮುಂದೂಡಿಕೆ ➤ ಆರೋಗ್ಯ ಇಲಾಖೆ ಸ್ಪಷ್ಟನೆ

error: Content is protected !!
Scroll to Top