ಶ್ರೀನಿವಾಸ ವಿಶ್ವವಿದ್ಯಾನಿಲಯದಲ್ಲಿ ಐಇಇಇ ರಾಷ್ಟ್ರ ಮಟ್ಟದ ವೆಬಿನಾರ್

(ನ್ಯೂಸ್ ಕಡಬ) newskadaba.com ಮಂಗಳೂರು, ಅ.24. ಐಇಇಇ  ಶ್ರೀನಿವಾಸ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಶಾಖೆಯ ವತಿಯಿಂದ ದಿನಾಂಕ ಶುಕ್ರವಾರದಂದು “ಸಂಶೋಧನ ಸಮುದಾಯಕ್ಕೆ ಐಇಇಇಯ ಪ್ರಯೋಜನಗಳು” ಎಂಬ ವಿಷಯದ ಮೇಲೆ ರಾಷ್ಟ್ರಮಟ್ಟದ ವೆಬಿನಾರ್‍ಆಯೋಜಿಸಲಾಯಿತು.

ಡಾ. ವೇದ್ ಪ್ರಕಾಶ್ ಮಿಶ್ರಾ, ಕಾರ್ಯಕ್ರಮ ನಾಯಕರು, ಸಹಾಯಕ ಪ್ರೊಫೆಸರ್, ಗಣಕ ವಿಜ್ಞಾನ ಮತ್ತುತಂತ್ರಜ್ಞಾನ ವಿಭಾಗ ಹಾಗೂ ಶಾಖಾ ಸಲಹೆಗಾರರರು ಐಇಇಇ ವಿದ್ಯಾರ್ಥಿ ಶಾಖೆ, ಅಮಿಟಿ ವಿಶ್ವವಿದ್ಯಾನಿಲಯ, ದುಬೈ, ಯು.ಎ.ಇ.  ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ಅವರು “ಐಇಇಇ ಯು ಸಂಶೋಧನೆಗೆಂದೇ ಹುಟ್ಟು ಹಾಕಲ್ಪಟ್ಟ ಸಂಸ್ಥೆಯಾಗಿದೆ. ಇದರಲ್ಲಿ ಭಾಗಿಯಾದಲ್ಲಿ ಪ್ರತಿಯೊಬ್ಬ ಸಂಶೋಧಕನಲ್ಲೂ ಮಹತ್ತರವಾದ ಬದಲಾವಣೆಗಳನ್ನು ಕಾಣಬಹುದಾಗಿದೆ. ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಐಇಇಇನಲ್ಲಿ ಹಲವಾರು ಶಾಖೆಗಳಿವೆ. ಐಇಇಇನ ಸದಸ್ಯನಾಗಿದ್ದಲ್ಲಿಆಯಾಯ ಕ್ಷೇತ್ರದಲ್ಲಿನ ಪರಿಣಿತರ ಸಹಾಯ ಸುಲಭವಾಗಿ ದೊರೆಯುತ್ತದೆ. ಐಇಇಇನಿಂದ ಪ್ರತಿ ಗಂಟೆಗೆ 11,000ಕ್ಕೂ ಮಿಗಿಲಾಗಿ ಸಂಶೋಧನಾ ಲೇಖನಗಳನ್ನು ಡೌನ್‍ ಲೋಡ್ ಮಾಡಲಾಗುತ್ತದೆ. 24ಕ್ಕೂ ಹೆಚ್ಚು ನೊಬೆಲ್ ಪ್ರಶಸ್ತಿ ವಿಜೇತರು ಐಇಇಇ ನ ಸದಸ್ಯರಾಗಿರುತ್ತಾರೆ. ಈ ವಿಷಯಗಳು ಐಇಇಇ ನ ಜನಪ್ರಿಯತೆಗೆ ಹಿಡಿದ ಕೈಗನ್ನಡಿಯಾಗಿವೆ. ಯಾವುದೇ ವಿಷಯಕ್ಕೆ ಸಂಬಂಧಿಸಿದ ಸಂಶೋಧನ ಲೇಖನಗಳನ್ನು ಐಇಇಇನಲ್ಲಿ ಸುಲಭವಾಗಿ ಪ್ರಕಟಿಸಲಾಗುತ್ತದೆ. ಪ್ರತಿಯೊಂದು ಲೇಖನವೂ ಪ್ರಕಟಣೆಗೆ ಮೊದಲು ಪರಿಣಿತರಿಂದ ಪುನರವಲೋಕಿಸಲ್ಲಡುತ್ತವೆ. ಸಂಶೋಧನ ಮಾಹಿತಿಯ ಸುಲಭವಾಗಿ ಹುಡುಕುವಿಕೆ ಐಇಇಇ ನ ವೈಶಿಷ್ಟ್ಯವಾಗಿದೆ”ಎಂದು ಹೇಳಿದರು.

Also Read  ಎಣ್ಮೂರು: ನೂತನ ಶಾದಿ ಮಹಲ್ ಉದ್ಘಾಟನೆ ಹಾಗೂ ಬಡ ಹೆಣ್ಣು ಮಕ್ಕಳ ಮದುವೆ ಕಾರ್ಯಕ್ರಮ

ಇದಲ್ಲದೆ ಐಇಇಇ ನಿಂದ ಸಂಶೋಧನ ವಿದ್ಯಾರ್ಥಿಗಳಿಗೆ ಕೊಡಲ್ಪಡುವ ಧನಸಹಾಯ, ಐಇಇಇ ಸಮ್ಮೇಳನಗಳನ್ನು ನಡೆಸಲು ಇರುವ ನಿಬಂಧನೆಗಳ ಬಗ್ಗೆಯೂ ವಿವರವಾಗಿ ಮಾಹಿತಿ ನೀಡಿದರು.  ಐಇಇಇ ಶ್ರೀನಿವಾಸ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಶಾಖೆಯ ಸಲಹೆಗಾರರಾದ ಡಾ. ಎ. ಜಯಂತಿಲಾ ದೇವಿ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಐಇಇಇ  ಶ್ರೀನಿವಾಸ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಶಾಖೆಯ ಸದಸ್ಯರಾದ ಶ್ರೀಮತಿ ರಾಜೇಶ್ವರಿ ಎಂ. ಸ್ವಾಗತಿಸಿದರು. ಐಇಇಇ  ಶ್ರೀನಿವಾಸ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಶಾಖೆಯ ಅಧ್ಯಕ್ಷರಾದ  ಶ್ರೀ ವಿನಯಚಂದ್ರ ವಂದಿಸಿದರು. ಐಇಇಇ  ಶ್ರೀನಿವಾಸ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಶಾಖೆಯ ಸಮಾಲೋಚಕರಾದ ಡಾ. ಕೃಷ್ಣ ಪ್ರಸಾದ್ ಕೆ. ಮಾರ್ಗದರ್ಶನ ನೀಡಿದರು. ಶ್ರೀನಿವಾಸ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಶಾಖೆಯ ಕಾರ್ಯದರ್ಶಿಯಾದ ಶ್ರೀಮತಿ ಗೀತಾ ಪೂರ್ಣಿಮಾ ಕೆ. ಕಾರ್ಯಕ್ರಮ ನಿರೂಪಿಸಿದರು. ಶಾಖೆಯ ಸದಸ್ಯರು ಹಾಗೂ ಸಂಶೋಧನ ವಿದ್ಯಾರ್ಥಿಗಳು ಭಾಗವಹಿಸಿದರು.

Also Read  ಸುಬ್ರಹ್ಮಣ್ಯ: ಉದ್ಯೋಗ ನೈಪುಣ್ಯ ಶಿಬಿರ ➤ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಂದ ಉದ್ಘಾಟನೆ

error: Content is protected !!
Scroll to Top