ರಾಜ್ಯಕ್ಕೆ ಮತ್ತೊಂದು ಮಹಾಮಾರಿ ಎಂಟ್ರಿ ➤ ಜಾನುವಾರುಗಳಿಗೆ ಅಂಟಿದ ಚರ್ಮಗಂಟು ವೈರಸ್

(ನ್ಯೂಸ್ ಕಡಬ) newskadaba.com ಶಿವಮೊಗ್ಗ . 24: ರಾಜ್ಯಕ್ಕೆ ಮತ್ತೊಂದು ಮಹಾಮಾರಿ ಎಂಟ್ರಿ ಕೊಟ್ಟಿದೆ. ಮಲೆನಾಡಿನ ಜಾನುವಾರುಗಳಲ್ಲಿ ಕಾಣಿಸಿಕೊಂಡಿರುವ ಈ ಕಾಯಿಲೆ ಹೆಸರು ಲುಂಪಿ ಸ್ಕಿನ್ (ಚರ್ಮಗಂಟು ರೋಗ).ಪಾಕ್ಸ್ ವಿರಿಡೆ ಎಂಬ ವೈರಸ್​ನಿಂದ ಹರಡುವ ಚರ್ಮಗಂಟು ರೋಗ ಮಲೆನಾಡಿನ 50ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪತ್ತೆಯಾಗಿದೆ.

ಮಲೆನಾಡಿನ ಗ್ರಾಮಗಳ ಜಾನುವಾರುಗಳಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದೆ. ಈ ರೋಗವುಳ್ಳ ಜಾನುವಾರುಗಳ ನೇರ ಸಂಪರ್ಕ, ಮೇವು, ನೀರಿನಿಂದಲೂ ಹರಡುವ ಚರ್ಮಗಂಟು ರೋಗ ಶಿವಮೊಗ್ಗದ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಗೆ ಹೊಸ ತಲೆನೋವಾಗಿ ಪರಿಣಮಿಸಿದೆ.

 

ರೋಗಗ್ರಸ್ತ ಜಾನುವಾರುಗಳನ್ನು ಗುಂಪಿನಿಂದ ಪ್ರತ್ಯೇಕವಾಗಿರಿಸಲು ಪಶುಪಾಲನಾ ಇಲಾಖೆ ಜಾಗೃತಿ ಮೂಡಿಸುತ್ತಿದೆ.ರೋಗಗ್ರಸ್ತ ಜಾನುವಾರುಗಳಲ್ಲಿ ಶೇ.1 ರಿಂದ 5 ರಷ್ಟು ಜಾನುವಾರುಗಳು ಸಾವನ್ನಪ್ಪಲಿವೆ ಎಂದು ಎಚ್ಚರಿಸಿರುವ ಇಲಾಖೆ, ಜಾನುವಾರುಗಳಿಗೂ ಐಸೋಲೇಶನ್ ಮಾಡಲಾಗುತ್ತಿದೆ. ಕೋವಿಡ್ 19 ಜನರನ್ನು ಕಾಡಿದಂತೆ. ಇದೀಗಾ ಈ ಕಾಯಿಲೆ ಮೂಕ ಪ್ರಾಣಿ ಜಾನುವಾರುಗಳನ್ನು ಕಾಡಲು ಆರಂಭಿಸಿದೆ.

Also Read  ಪುತ್ತೂರು: ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಮಿನಿ ಟೆಂಪೋ..!! ➤ ಓರ್ವನಿಗೆ ಗಾಯ

 

error: Content is protected !!
Scroll to Top