ಕಡಬ: ಬ.ಸಿ.ರೋಡ್- ಗುಂಡ್ಯ ಹೆದ್ದಾರಿ ಗುಂಡಿ ಮುಚ್ಚುವಂತೆ ನೀತಿ ತಂಡದ ವತಿಯಿಂದ ಕೇಂದ್ರ ಸಚಿವರಿಗೆ ಮನವಿ

(ನ್ಯೂಸ್ ಕಡಬ) newskadaba.com ಕಡಬ, ಅ. 24. ರಾ.ಹೆ. 75ರ ಬಿ.ಸಿ. ರೋಡ್ ನಿಂದ ಗುಂಡ್ಯದವರೆಗೆ  ಹೆದ್ದಾರಿ ರಸ್ತೆಯು ತೀರಾ ಹದಗೆಟ್ಟಿದ್ದು, ಸೂಕ್ತವಾದ ಕ್ರಮ ಕೈಗೊಳ್ಳುವಂತೆ ಕಡಬ ನೀತಿ ಸಂಘಟನೆ ವತಿಯಿಂದ ಕಡಬ ಉಪ ತಹಶೀಲ್ದಾರ್ ಮನೋಹರ್ ಅವರ ಮೂಲಕ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಇಂದು ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ ಹೆದ್ದಾರಿಯು ಗುಂಡಿಗಳಿಂದ ಕೂಡಿದ್ದು ವಾಹನ ಸವಾರರು ಅಪಾಯವನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಉಲ್ಲೇಖಿಸಲಾಗಿದೆ. ಈ ವೇಳೆ ಕಂದಾಯ ನಿರೀಕ್ಷಕ ಅವಿನ್ ರಂಗತಮಲೆ, ನೀತಿ ತಂಡದ ಜಿಲ್ಲಾ ಅಧ್ಯಕ್ಷ ಜೋಸ್ ತೋಮಸ್ ಹಾಗೂ ತಾಲೂಕು ಅಧ್ಯಕ್ಷ ರಂಜಿತ್ ಉಪಸ್ಥಿತರಿದ್ದರು.

Also Read  ಧರ್ಮಸ್ಥಳ ಬಜರಂಗದಳ ಮುಖಂಡನಿಂದ ದಲಿತ ವ್ಯಕ್ತಿಯ ಹತ್ಯೆ ➤ ಅಲ್ ಇಂಡಿಯಾ ಲಾಯರ್ಸ್ ಕೌನ್ಸಿಲ್ ಕರ್ನಾಟಕ ತಂಡ ಭೇಟಿ

error: Content is protected !!
Scroll to Top