ಇಂದು ಡಾ. ವೀರೇಂದ್ರ ಹೆಗ್ಗಡೆಯವರ 53ನೇ ಪಟ್ಟಾಭಿಷೇಕ ಮಹೋತ್ಸವ

(ನ್ಯೂಸ್ ಕಡಬ) newskadaba.com ಉಜಿರೆ . 24: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ 53ನೇ ವರ್ಷದ ವರ್ಧಂತಿ ಸಮಾರಂಭ ಅ. 24ರ  ಇಂದು ಸರಳವಾಗಿ ನಡೆಯಲಿದೆ. 1948ರ ನವೆಂಬರ್‌ 25ರಂದು ಜನಿಸಿದ ಅಂದಿನ ವೀರೇಂದ್ರ ಕುಮಾರ್‌ ತನ್ನ ಇಪ್ಪತ್ತನೇ ಹರೆಯದಲ್ಲಿ ಧರ್ಮಸ್ಥಳದ 21ನೇ ಧರ್ಮಾಧಿಕಾರಿಯಾಗಿ ನೆಲ್ಯಾಡಿ ಬೀಡಿನಲ್ಲಿ ಪಟ್ಟಾಭಿಷಿಕ್ತರಾದರು.

2017ರ ಅಕ್ಟೋಬರ್‌ 24ರಂದು ಡಾ.ಡಿ. ವೀರೇಂದ್ರ ಹೆಗ್ಗಡೆಯವರು 50 ವರ್ಷಗಳ ಸೇವೆಯನ್ನು ಪೂರೈಸಿದ್ದು, 2018ರ ಅ.24ರವರೆಗೆ ಒಂದು ವರ್ಷ ವೈವಿಧ್ಯಮಯ ಕಾರ‍್ಯಕ್ರಮಗಳೊಂದಿಗೆ ಸುವರ್ಣ ಮಹೋತ್ಸವ ಆಚರಿಸಲಾಯಿತು. ಅನೇಕ ಮೌಲಿಕ ಕೃತಿಗಳ ಜತೆಗೆ ‘ಧರ್ಮಯಾನ’ ಎಂಬ ಅಭಿನಂದನಾ ಗ್ರಂಥ ಪ್ರಕಟಿಸಲಾಗಿದೆ.

Also Read  ಆನ್ ಲೈನ್ ತರಗತಿ ಬಂದ್ ಮಾಡಿ ,ನಾಳೆ ಭಾರತ್ ಬಂದ್ ಗೆ ಬೆಂಬಲ

 

ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು , ಕೀರ್ತಿಶೇಷ ರತ್ನವರ್ಮ ಹೆಗ್ಗಡೆ ಮತ್ತು ರತ್ನಮ್ಮ ದಂಪತಿ ಹಿರಿಯ ಪುತ್ರನಾಗಿ ವೀರೇಂದ್ರ ಕುಮಾರ್‌ 1948ರ ನವೆಂಬರ್‌ 25ರಂದು ಜನಿಸಿದರು. ಡಿ. ಸುರೇಂದ್ರ ಕುಮಾರ್‌, ಡಿ. ಹರ್ಷೇಂದ್ರ ಕುಮಾರ್‌ ಮತ್ತು ಡಿ. ರಾಜೇಂದ್ರ ಕುಮಾರ್‌ ಸಹೋದರರು ಹಾಗೂ ಪದ್ಮಲತಾ ಸಹೋದರಿ ಇದ್ದಾರೆ. ಪತ್ನಿ ಹೇಮಾವತಿ ಹೆಗ್ಗಡೆ, ಮಗಳು ಶ್ರದ್ಧಾ ಅಮಿತ್‌, ಮೊಮ್ಮಗಳು ಕುಮಾರಿ ಮಾನ್ಯ ಸೇರಿದಂತೆ ಸ್ನೇಹಿತರನ್ನು ,ಕುಟುಂಬವನ್ನು ಹಾಗೂ ಅಪಾರ ಬಂಧು ಬಳಗವನ್ನು ಹೊಂದಿದ್ದಾರೆ

 

error: Content is protected !!
Scroll to Top