ಬೆಳ್ತಂಗಡಿ: ತನ್ನೀರುಪಂತ ಮತ್ತು ಕರಾಯ ಗ್ರಾಮದ ಎಸ್.ಡಿ.ಪಿ.ಐ ಅಭ್ಯರ್ಥಿಗಳ ಘೋಷಣೆ ಹಾಗೂ ಹೊಸ ಸದಸ್ಯರ ಸೇರ್ಪಡೆ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಅ. 24: ತಣ್ಣೀರುಪಂತ ಮತ್ತು ಕರಾಯ ಗ್ರಾಮ ಪಂಚಾಯತ್ ಚುನಾವಣೆಯ ಅಭ್ಯರ್ಥಿಗಳ ಪ್ರಥಮ ಪಟ್ಟಿ ಘೋಷಣಾ ಕಾರ್ಯಕ್ರಮವು ಕಲ್ಲೇರಿ ಅಂಬೇಡ್ಕರ್ ಭವನದಲ್ಲಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಪಿ.ಐ ತಣ್ಣೀರುಪಂತ ಮತ್ತು ಕರಾಯ ಗ್ರಾಮ ಸಮಿತಿ ಅಧ್ಯಕ್ಷರಾದ ನವಾಝ್ ಕುದ್ರಡ್ಕ ವಹಿಸಿದ್ದರು. ಎಸ್.ಡಿ.ಪಿ.ಐ ಕರ್ನಾಟಕ ರಾಜ್ಯ ನಾಯಕರಾದ ಶಾಫಿ ಬೆಳ್ಳಾರೆ ಮುಖ್ಯ ಅತಿಥಿಯಾಗಿ ಭಾಗವಹಿಸಿ “ಸಂವಿಧಾನ ವಿರೋಧಿಗಳ ಹಾಗೂ ಅನ್ಯಾಯ ಅಕ್ರಮಗಳ ವಿರುದ್ಧದ ನಮ್ಮ ಹೋರಾಟವನ್ನು ಗ್ರಾಮ ಪಂಚಾಯತ್ ಒಳಗೂ ಮುಂದುವರಿಸಲು ಹಾಗೂ ತಮ್ಮ ಊರನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ನಮ್ಮ ಅಭ್ಯರ್ಥಿಗಳಿಗೆ ಸಂಪೂರ್ಣ ಬೆಂಬಲ ನೀಡಬೇಕಾಗಿದೆ” ಎಂದು ಹೇಳಿದರು. ಪ್ರಾಸ್ತಾವಿಕವಾಗಿ SDPI ಬೆಳ್ತಂಗಡಿ ವಿಧಾನ ಸಭಾ ಅಧ್ಯಕ್ಷರಾದ ಹೈದರ್ ನೀರ್ಸಾಲ್ ಮಾತನಾಡಿ ಅಭ್ಯರ್ಥಿಗಳ ಘೋಷಣೆ ಮಾಡಿದರು.

 

ತನ್ನೀರುಪಂತ ಮತ್ತು ಕರಾಯ ಗ್ರಾಮ ಪಂಚಾಯತ್ ಪ್ರಥಮ‌‌ ಹಂತದ 12 ಅಭ್ಯರ್ಥಿಗಳ ವಿವರ:

Also Read  ಉಪ್ಪಿನಂಗಡಿ: ಖಾಸಗಿ ಬಸ್ ಪಲ್ಟಿ ➤ ಮೂವರಿಗೆ ಗಾಯ

ತನ್ನಿರುಪಂತ ವಾರ್ಡ್ ನಂ – 01: ಮಹಮ್ಮದ್ ನಿಸಾರ್ ಕುದ್ರಡ್ಕ, ನಸೀರ ಬಾನು, ಅವ್ವಮ್ಮ

ತನ್ನೀರುಪಂತ ವಾರ್ಡ್ ‌ನಂ -02: ಶರಫುದ್ದಿನ್, ಅಬ್ದುಲ್ ಅಜೀಜ್, ಜುಬೈದ

ಕರಾಯ ವಾರ್ಡ್ ನಂ – 01: ಜಮಾಲ್

ಕರಾಯ ವಾರ್ಡ್ ನಂ 02: ಇಲಿಯಾಸ್ ಕರಾಯ, ಝುಬೈದ

 ಕರಾಯ ವಾರ್ಡ್ ನಂ 03: ಮಹಮ್ಮದ್ ನವಾಜ್, ಅಶ್ರಫ್ ಕಲ್ಲೇರಿ, ಜುಬೈದ. ಕೆ      

ಈ ಸಂಧರ್ಭದಲ್ಲಿ ಪಕ್ಷದ ಸಿದ್ದಾಂತಗಳನ್ನು ಒಪ್ಪಿ ಸುಮಾರು 50 ಕ್ಕೂ ಮಂದಿ ಪಕ್ಷ ಕ್ಕೆ ಸೇರ್ಪಡೆ ಯಾದರು. ವೇದಿಕೆಯಲ್ಲಿ SDPI ಬೆಳ್ತಂಗಡಿ ತಾಲೂಕು ಉಪಾಧ್ಯಕ್ಷರಾದ ಶುಕೂರು ಕುಪ್ಪೆಟ್ಟಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಡಂತ್ಯಾರ್ ವಲಯ ಅಧ್ಯಕ್ಷರಾದ ರಜಾಕ್ ಬಿ ಎಂ, SDPi ಬೆಳ್ತಂಗಡಿ ತಾಲೂಕು ಸಮಿತಿ ಸದಸ್ಯರಾದ ಮಹಮ್ಮದ್ ನಿಸಾರ್ ಕುದ್ರಡ್ಕ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಲ್ಲೇರಿ ವಲಯ ಅಧ್ಯಕ್ಷರಾದ ಮುಸ್ತಫಾ ಪೆರ್ನೆ, ತಣ್ಣೀರುಪಂತ ಮತ್ತು ಕರಾಯ ಗ್ರಾಮ ಚುನಾವಣೆ ಉಸ್ತುವಾರಿಯಾದ ಲತೀಫ್ ಪುಂಜಾಲಕಟ್ಟೆ, SDPi ಕರಾಯ ಬ್ರಾಂಚ್ ಅಧ್ಯಕ್ಷರಾದ ಸೇಕುಂಞಿ ಮುಂತಾದವರು ಉಪಸ್ಥಿತರಿದ್ದರು. ರವೂಫ್ ಪುಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿ  ಧನ್ಯವಾದಗೈದರು.

Also Read  ಕಡಬ: ಮನೆಯ ಮೇಲೆ ಬಿದ್ದ ಮರ ► ಮಹಿಳೆಗೆ ಗಾಯ

error: Content is protected !!
Scroll to Top