ಆನ್‍ಲೈನ್ ತರಗತಿ ವೇಳೆ ಮಗಳಿಗೆ ಪೆನ್ಸಿಲ್‍ನಿಂದ ಇರಿದು ಹಲ್ಲೆ ➤ ತಾಯಿಯ ವಿರುದ್ಧ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಮುಂಬೈ . 24: ಆನ್‍ಲೈನ್ ತರಗತಿ ವೇಳೆ ಸರಿಯಾಗಿ ಗಮನ ಹರಿಸಿಲ್ಲ, ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿಲ್ಲ ಎಂದು ಕೋಪಗೊಂಡ ತಾಯಿ ತನ್ನ ಮಗಳಿಗೆ ಪೆನ್ಸಿಲ್‍ನಿಂದ ಇರಿದು ಹಲ್ಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

ಪೆನ್ಸಿಲ್‍ನಿಂದ ತನ್ನ 12 ವರ್ಷದ ಮಗಳ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಸ್ಯಾಂಟಾಕ್ರಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆನ್‍ಲೈನ್ ತರಗತಿ ವೇಳೆ ಗಮನಹರಿಸಿಲ್ಲ ಹಾಗೂ ಶಿಕ್ಷಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿಲ್ಲ ಎಂಬ ಉದ್ದೇಶದಿಂದ ತಾಯಿ ಮಗಳ ಮೇಲೆ ಹಲ್ಲೆ ಮಾಡಿದ್ದಾಳೆ.ಇಡೀ ಘಟನೆಗೆ ಬಾಲಕಿ ತಂಗಿ ಸಾಕ್ಷಿಯಾಗಿದ್ದು, ಇದರಿಂದ ಬೇಸತ್ತು, ಹೆದರಿ ನಂತರ ಬಾಲಕಿಯ ತಂಗಿಯೇ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿದ್ದಾಳೆ.ದೂರು ಆಧರಿಸಿ ಇಬ್ಬರು ಎನ್‍ಜಿಒ ಪ್ರತಿನಿಧಿಗಳು ಬಾಲಕಿಯ ಮನೆಗೆ ಆಗಮಿಸಿದ್ದು  ತಾಯಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Also Read  ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ➤ ಸಿಎಂ ಬೊಮ್ಮಾಯಿ ಚಾಲನೆ!

 

 

error: Content is protected !!
Scroll to Top