ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದ ನಟ ಧನ್ವೀರ್

(ನ್ಯೂಸ್ ಕಡಬ) newskadaba.com ಮೈಸೂರು . 23: ಯುವನಟ ಧನ್ವೀರ್ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಂಡೀಪುರದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧವೇರಿದ್ದರೂ ಕೂಡ ಈ ನಿಯಮವನ್ನು ಉಲ್ಲಂಘಿಸಿ ಕಳೆದ ರಾತ್ರಿ ಧನ್ವೀರ್ ಸಫಾರಿ ಮಾಡಿರುವುದರಿಂದ ಅವರ ಮೇಲೆ ಸಾರ್ವಜನಿಕರ ಕೆಂಡಮಂಡಲವಾಗಿದ್ದಾರೆ.ಸರ್ಕಾರ ಮಾಡುವ ನಿಯಮಗಳು ಕೇವಲ ಜನಸಾಮಾನ್ಯರಿಗೆ ಮಾತ್ರ ಅನ್ವಯವಾಗುತ್ತವೆಯೇ ಸೆಲಬ್ರೆಟಿಗಳಿಗೆ ಈ ನಿಯಮಗಳು ಅನ್ವಯವಾಗುವುದಿಲ್ಲವೇ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

ನಟ ಧನ್ವೀರ್ ರಾತ್ರಿ ಬಂಡೀಪುರದ ಅಭಯರಾಣ್ಯದಲ್ಲಿ ಸಫಾರಿ ನಡೆಸಿದ ನಂತರ ತಮ್ಮ ಸಾಮಾಜಿಕ ಜಾಲಗಳಲ್ಲಿ ತಾನು ನೋಡಿದ ಹುಲಿ ಹಾಗೂ ಮತ್ತಿತರ ಪ್ರಾಣಿಗಳ ಬಗ್ಗೆ ಹಂಚಿಕೊಂಡಿದ್ದಾರೆ.ಸಾರ್ವಜನಿಕರಿಗೆ ಇರುವಂತೆಯೇ ನಿಯಮಗಳನ್ನು ಹಾಕಿ ಅದನ್ನು ಮೀರಿದರೆ ಕಾನೂನು ಬಾಹಿರವಾಗಿ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Also Read  ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ 64ನೇ ಜನ್ಮದಿನದ ಸಂಭ್ರಮ

error: Content is protected !!
Scroll to Top