ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಎಲ್ಲ ವಸ್ತುಗಳು ಸುರಕ್ಷಿತವಾಗಿದೆ ➤ ಆಡಳಿತ ಮಂಡಳಿ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ  . 23: ವಿಶ್ವ ವಿಖ್ಯಾತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಆಭರಣಗಳ ಅವ್ಯವಹಾರ ನಡೆಸಿರುವ ಆರೋಪವು ದೇವಸ್ಥಾನದ ಆಡಳಿತ ಮಂಡಳಿಯ ಮೇಲೆಯೇ ಕೇಳಿಬಂದಿದ್ದು, ದೇವಾಲಯದ ಆಡಳಿತಾಧಿಕಾರಿ ಶ್ರೀಮತಿ ರೂಪಾ ಎಂ.ಜೆ ಹಾಗೂ ದೇಗುಲದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯಾಗಿದ್ದ ರವೀಂದ್ರ ಎಂ.ಎಚ್ ಅವರ ಮೇಲೆ ಸುಬ್ರಹ್ಮಣ್ಯದ ನಿವಾಸಿ ಶ್ರೀನಾಥ್ ಟಿ.ಎಸ್. ಅವರು ಮಂಗಳೂರಿನ ಪಶ್ಚಿಮ ವಲಯ ಭ್ರಷ್ಟಾಚಾರ ನಿಗ್ರಹದಳದ ಪೋಲಿಸ್ ಅಧೀಕ್ಷಕರಿಗೆ ದೂರು ದಾಖಲಿಸಿ, ಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದರು.

 

ಆದರೆ ಈ ಬಗ್ಗೆ ಪತ್ರಿಕಾ ಪ್ರಕಟನೆ ಮಾಡಿರುವ ದೇವಸ್ಥಾನದ ದೇಗುಲದ ಆಡಳಿತಾಧಿಕಾರಿ ಎಂ.ಜೆ ರೂಪ ಅವರು ಕಾರ್ಯಾನಿರ್ವಹಾಧಿಕಾರಿ ರವೀಂದ್ರರವರು ಶ್ರೀನಾಥ್ ಮಾಡಿರುವ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ. ದೇಗುಲದಲ್ಲಿ ಯಾವುದೇ ಆಕ್ರಮ ನಡೆದಿಲ್ಲ. ಶ್ರೀ ನಾಥ್ ವೈಯಕ್ತಿಕ ದ್ವೇಷದಿಂದ ದೂರು ದಾಖಲಿಸಿದ್ದು, ಆ ಮೂಲಕ ದೇಗುಲದ ಘನತೆ, ಪಾವಿತ್ರ್ಯೆತೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.

Also Read  ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾರ

error: Content is protected !!
Scroll to Top