ಉಡುಪಿ: 50ಕ್ಕೂ ಹೆಚ್ಚು ದಲಿತರು ಬೌದ್ಧ ಧರ್ಮಕ್ಕೆ ಮತಾಂತರ

(ನ್ಯೂಸ್ ಕಡಬ) newskadaba.com ಉಡುಪಿ . 23:  ಉಡುಪಿ ಜಿಲ್ಲಾ ಬೌದ್ಧ ಮಹಾ ಸಭಾ ಇದರ ವತಿಯಿಂದ ಆಯೋಜಿಸಿದ್ದ ಬಾಬಾಸಾಹೇಬ್ ಅಂಬೇಡ್ಕರ್‌ ಅವರ 64 ನೇ ಧಮ್ಮ ಚಕ್ರ ಪ್ರವರ್ತನಾ ದಿನಾಚರಣೆಯಲ್ಲಿ 50 ಕ್ಕೂ ಅಧಿಕ ದಲಿತರು ಬೌದ್ಧ ಧರ್ಮಕ್ಕೆ ಮತಾಂತರಗೊಂಡರು.

ಮೈಸೂರು ಕೊಳ್ಳೆಗಾಲದ ಜೀವನ ಬುದ್ಧ ವಿಹಾರದಿಂದ ಆಗಮಿಸಿದ್ದ ಸುಗತಪಾಲ ಭಂತೇಜಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಅವರಿಗೆ ಪ್ರಮಾಣವಚನ ಬೋಧಿಸಿದರು.ಮತಾಂತರಗೊಂಡ ಬೌದ್ಧರು ತಮ್ಮ ಬಲಕೈಯನ್ನು ಮುಂದಕ್ಕೆ ಚಾಚಿ ಪ್ರಮಾಣವಚನ ಸ್ವೀಕರಿಸಿದರು. ಅದೇ ರೀತಿ ಉಡುಪಿ ಜಿಲ್ಲೆಯಲ್ಲಿ ಅತ್ಯಾಧಿಕ ಅಂಕಗಳನ್ನು ಪದವಿಪೂರ್ವ ಮತ್ತು ಹತ್ತನೇ ತರಗತಿಯಲ್ಲಿ ಗಳಿಸಿದ ಸುಮಾರು 30ಕ್ಕೂ ಹೆಚ್ಚು ವಿಧ್ಯಾರ್ಥಿಗಳಿಗೆ ಸಹಾಯಧನವನ್ನು ನೀಡಿ ಸನ್ಮಾನಿಸಲಾಯಿತು.

Also Read  ವಿಟ್ಲ: ಮಂತ್ರವಾದಿ ಜೊತೆ ಪರಾರಿ ಎಂದು ಶಂಕಿಸಲಾಗಿದ್ದ ಯುವತಿ ಚಿಕ್ಕಮಗಳೂರಿನಲ್ಲಿ ಪತ್ತೆ

 

 

 

 

error: Content is protected !!
Scroll to Top