ನೀರಿನ ಬಿಲ್ ಬಗ್ಗೆ ತಕರಾರು- ಅರ್ಜಿ ಸಲ್ಲಿಸಲು ಅವಕಾಶ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 22. ಮಹಾನಗರ ಪಾಲಿಕೆಯಿಂದ ನೀಡಲಾದ ನೀರಿನ ಬಿಲ್ಲಿನಲ್ಲಿ ಹೆಚ್ಚುವರಿ ಬಂದಿರುವ ಬಗ್ಗೆ ಅಥವಾ ಇತರ ಯಾವುದೇ ತಕರಾರುಗಳು ಇದ್ದಲ್ಲಿ ನವೆಂಬರ್ 5 ರೊಳಗೆ ಮಹಾನಗರ ಪಾಲಿಕೆಗೆ ಅರ್ಜಿಯನ್ನು ಸಲ್ಲಿಸಬೇಕು.


ಅರ್ಜಿಗಳನ್ನು ಮಹಾನಗರ ಪಾಲಿಕೆಯ ನೀರಿನ ಅದಾಲತ್ ಸಭೆಗಳಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಮಹಾ ಪೌರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top