ಅದಿತ್ಯನಾಥ ಸರಕಾರವನ್ನು ತಕ್ಷಣವೇ ವಜಾ ಮಾಡಬೇಕು ➤ ಮಾಜಿ ಶಾಸಕ ವಸಂತ ಬಂಗೇರ ಒತ್ತಾಯ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ . 22: ಉತ್ತರಪ್ರದೇಶ ಸಿಎಂ ಆದಿತ್ಯನಾಥ್ ನಾಡಿನಲ್ಲಿ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆಕೃತ್ಯ ನಡೆದಿದ್ದು ದೇಶವೇ ತಲೆತಗ್ಗಿಸುವ ಕೆಲಸ ಆಗಿದೆ. ಪೊಲೀಸರ ಮೇಲೆ ಒತ್ತಡ ಹೇರಿ ಮೃತ ಯುವತಿಯ ಮನೆಯವರಿಗೆ ಮೃತದೇಹದ ಮುಖದರ್ಶನಕ್ಕೂ ಅವಕಾಶ ನೀಡದೆ ದುರಹಂಕಾರ ಮೆರೆಯಲಾಗಿದೆ. ಅಂತಹಾ ನೀಚ ಸರಕಾರವನ್ನು ತಕ್ಷಣವೇ ವಜಾ ಮಾಡಬೇಕು ಎಂದು ಮಾಜಿ ಶಾಸಕ ವಸಂತ ಬಂಗೇರ ಆಗ್ರಹಿಸಿದರು.

ಉತ್ತರಪ್ರದೇಶದ ಹತ್ರಾಸ್‍ನಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ ಕೃತ್ಯವನ್ನು ಖಂಡಿಸಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಘಟಕಗಳ ನೇತೃತ್ವದಲ್ಲಿ ಅ. 21 ರಂದು ಬೆಳ್ತಂಗಡಿ ಮಿನಿ ವಿಧಾನ ಸೌಧದ ಮುಂದೆ ನಡೆದ ಪ್ರತಿಭಟನೆಯನ್ನುದ್ಧೇಶಿಸಿ ಅವರು ಮಾತನಾಡಿದ್ದರು .ಪ್ರತಿಭಟನೆಗೂ ಮುನ್ನ ಮಾಜಿ ಶಾಸಕ ವಸಂತ ಬಂಗೇರರರ ಕಚೇರಿ ಬಳಿಯಿಂದ ಮಿನಿ ವಿಧಾನ ಸೌಧದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.ಬಳಿಕ ಬಳಿಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ರಂಜನ್ ಜಿ ಗೌಡ, ಜಿ.ಪಂ ಸದಸ್ಯರು, ತಾ.ಪಂ ಸದಸ್ಯರು, ವಿವಿಧ ಘಟಕಗಳ ಮುಖಂಡರು ಮೊದಲಾದವರು ಭಾಗಿಯಾಗಿದ್ದರು.

Also Read  ಪುತ್ತೂರು :1 ಲಕ್ಷ ಆಯುರ್ವೇದ ಮಾತ್ರೆ ವಿತರಣೆ

error: Content is protected !!
Scroll to Top