ವರುಣನ ಅಬ್ಬರಕ್ಕೆ ತತ್ತರಿಸಿದ ಬೆಂಗಳೂರು ► ಜನಜೀವನ ಅಸ್ತವ್ಯಸ್ತ

(ನ್ಯೂಸ್ ಕಡಬ) newskadaba.com ಬೆಂಗಳೂರು,ಸೆ.27. ಸಿಲಿಕಾನ್‌ ಸಿಟಿ ಬೆಂಗಳೂರು ನಗರದಲ್ಲಿ ಮತ್ತೆ ಮಳೆ ಆರ್ಭಟಿಸಿದ್ದು, ಇಡೀ ರಾತ್ರಿ ಧಾರಾಕಾರ ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದೆ.

ನಾಯಂಡನಹಳ್ಳಿ, ಚಂದ್ರಾಲೇಔಟ್‌‌, ಶಿವಾಜಿ ನಗರ, ಜಯನಗರ, ಜೆ ಪಿ ನಗರ, ಸೇರಿದಂತೆ ವಿವಿಧೆಡೆ  ಮಳೆ ನೀರು ಮನೆಗಳಿಗೆ ನುಗ್ಗಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವೆಡೆ ಅಪಾರ್ಟ್‌ಮೆಂಟ್‌ಗಳು  ಜಲಾವೃತಗೊಂಡಿವೆ. ರಸ್ತೆ ಮೇಲೆ ನೀರು ಹರಿಯುವುದರಿಂದಾಗಿ ವಾಹನ ಸಂಚಾರ ಬಂದ್ ಆಗಿದೆ.

ಬಯ್ಯಪ್ಪನಹಳ್ಳಿಯ ಮೆಟ್ರೋ ನಿಲ್ದಾಣಕ್ಕೂ ನೀರು ನುಗ್ಗಿದ್ದು, ಪ್ಯಾಸೇಜ್‍ನಲ್ಲೆಲ್ಲಾ ನೀರು ನಿಂತಿದೆ. ಜನರು ಮೆಟ್ರೋ ನಿಲ್ದಣಕ್ಕೆ ಹೆಜ್ಜೆ ಇಡೋಕೆ ಹಿಂದೆ ಮುಂದೆ ನೋಡುವ ಸ್ಥಿತಿ ಎದುರಾಗಿದೆ.

Scroll to Top