ವಿಟ್ಲ: ಹಾರ್ಡ್ ವೇರ್ ಅಂಗಡಿಯಲ್ಲಿ ಕಳ್ಳತನ ➤ ಆರೋಪಿಯನ್ನು 24 ಗಂಟೆಯಲ್ಲಿ ಬಂಧಿಸಿದ ವಿಟ್ಲ ಪೊಲೀಸರು

(ನ್ಯೂಸ್ ಕಡಬ) newskadaba.com ವಿಟ್ಲ, ಅ. 21. ಇಲ್ಲಿನ ಹಾರ್ಡ್ ವೇರ್ ಅಂಗಡಿಯಲ್ಲಿ ಕಳ್ಳತನಗೈದ ಆರೋಪಿಯನ್ನು ಕೇವಲ 24 ಗಂಟೆಗಳ ಒಳಗೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಬಜ್ಪೆ ಆದ್ಯಪಾಡಿ ಕೊಂಚಾರು ನಿವಾಸಿ  ಮೊಹಮ್ಮದ್ ರಫೀಕ್ (32) ಎಂದು ಗುರುತಿಸಲಾಗಿದೆ. ಈತನಲ್ಲಿ ‘ಕರಾವಳಿ ಮಾರುತ’ ಮಾಧ್ಯಮ ಸಂಸ್ಥೆಗೆ ಸೇರಿದ ಗುರುತಿನ ಚೀಟಿಯೊಂದು ಪತ್ತೆಯಾಗಿದ್ದು, ಇದರ ಜೊತೆಗೆ ಪ್ರೆಸ್ ಸ್ಟಿಕರ್ ಅಂಟಿಸಿದ ದ್ವಿಚಕ್ರ ವಾಹನವನ್ನು ಕೂಡಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಟ್ಲ ಕಸಬ ಗ್ರಾಮದ ಮಾರ್ಣಮಿಗುಡ್ಡೆಯ ಚರ್ಚ್ ಸಮೀಪದ ರಾಕೇಶ್ ಶೆಟ್ಟಿ ಅವರಿಗೆ ಸೇರಿದ ರಿಧ್ವಿ ಹಾರ್ಡ ವೇರ್ ಅಂಗಡಿಗೆ ದ್ವಿಚಕ್ರದಲ್ಲಿ ಬಂದ ಅಪರಿಚಿತ ವ್ಯಕ್ತಿ ಅಕ್ರಮವಾಗಿ ಅಂಗಡಿಯ ಒಳಗೆ ಪ್ರವೇಶಿಸಿ ಡ್ರಾಯರ್ ನಲ್ಲಿದ್ದ 17 ಸಾವಿರ ರೂ ಕಳವು ಮಾಡಿ ಬಳಿಕ ದ್ವಿಚಕ್ರವಾಹನದಲ್ಲಿ ಪರಾರಿಯಾಗಿದ್ದ ಎಂದು ರಾಕೇಶ್ ಶೆಟ್ಟಿಯವರು  ದೂರು ನೀಡಿದ್ದರು. ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳ ನಿರ್ದೇಶನದಂತೆ ವಿಟ್ಲ ಪೊಲೀಸ್ ಉಪನಿರೀಕ್ಷಕ ವಿನೋದ್ ರೆಡ್ಡಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪ್ರಸನ್ನ, ಹೇಮರಾಜ, ಪ್ರತಾಪ, ವಿನಾಯಕ ತಂಡವು ಈ ಕಾರ್ಯಾಚರಣೆ ನಡೆಸಿತ್ತು.

error: Content is protected !!
Scroll to Top