ವಿಟ್ಲ: ದೇವಸ್ಥಾನದಲ್ಲಿ ಕಳವು ಪ್ರಕರಣ – ಆರೋಪಿಯ ಬಂಧನ ➤ 3 ವರ್ಷಗಳಲ್ಲಿಆರೋಪಿಯ ವಿರುದ್ದ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 13 ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ವಿಟ್ಲ, ಅ. 21. ಇಲ್ಲಿನ ದೇವಸ್ಥಾನವೊಂದರಲ್ಲಿ ಒಂದೂವರೆ ವರ್ಷಗಳ ಹಿಂದೆ ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಆರೋಪಿಯನ್ನು ಪುತ್ತೂರು ಮೂಲದ ಮುಡಿಪು ನವಗ್ರಾಮ ನಿವಾಸಿ ಮಹಮ್ಮದ್ ಸಾಧಿಕ್ ಯಾನೆ ಸಾಧಿಕ್ (21 ) ಎಂದು ಹೇಳಲಾಗಿದೆ. ಬಂಧಿತ ಆರೋಪಿಯು ಕುಖ್ಯಾತ ಕಳ್ಳನಾಗಿದ್ದು, ಆತನ ವಿರುದ್ದ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 13 ಪ್ರಕರಣಗಳು ದಾಖಲಾಗಿವೆ. ಈತ ತನ್ನ ಹದಿನೆಂಟನೇ ವಯಸ್ಸಿನಲ್ಲಿ ಕಳ್ಳತನಕ್ಕೆ ಇಳಿದಿದ್ದು, ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಐದು ಪ್ರಕರಣಗಳು ದಾಖಲಾಗಿದೆ. ಪುತ್ತೂರು ನಗರ, ಪುತ್ತೂರು ಗ್ರಾಮಾಂತರ, ಸುಳ್ಯ, ಬೆಳ್ಳಾರೆ ಹಾಗೂ ಬಂಟ್ವಾಳ ಠಾಣೆಗಳಲ್ಲಿಯೂ ಈತನ ವಿರುದ್ದ ಹಲವು ಕಳ್ಳತನದ ಪ್ರಕರಣಗಳು ದಾಖಲಾಗಿವೆ.

Also Read  ಕರಾವಳಿಯ ಕೆಲವು ಗ್ರಾಮಗಳಲ್ಲಿ ಇನ್ಮುಂದೆ 24 ಗಂಟೆ ವಿದ್ಯುತ್ ► ಅದರಲ್ಲಿ ನಿಮ್ಮ ಗ್ರಾಮ ಸೇರಿದೆಯೇ ಎಂದು ತಿಳಿಯಬೇಕೇ...?

error: Content is protected !!
Scroll to Top