ವಿಷವಿಕ್ಕಿದ ಕೋತಿಗಳನ್ನು ಎಸೆದು ಹೋದ ಕಿಡಿಗೇಡಿಗಳು

(ನ್ಯೂಸ್ ಕಡಬ) newskadaba.com ಕಾರ್ಕಳ, . 21. ಮಾರುತಿ ಓಮ್ನಿ ಕಾರಿನಲ್ಲಿ ಬಂದ ತಂಡವೊಂದು ವಿಷವಿಕ್ಕಿದ ಸುಮಾರು 15 ಮಂಗಗಳನ್ನು ಎಸೆದು ಹೋದ ಘಟನೆ ಕಾಂತಾವರದ ಬಾರಾಡಿಯ ಕಂಬಳ ರಸ್ತೆಯಲ್ಲಿ ನಡೆದಿದೆ.

ಘಟನಾ ಸ್ಥಳದಲ್ಲಿ 3 ಮಂಗಗಳು ಮೃತಪಟ್ಟಿದ್ದರೆ, ಉಳಿದ ಮಂಗಗಳು ಅರೆಪ್ರಜ್ಞಾ ಸ್ಥಿತಿಯಲ್ಲಿ ವಿವಿವಿಲನೆ ಹೊರಳಾಡುತ್ತಿದ್ದ ದೃಶ್ಯವು ಮನಕಲಕುವಂತಿತ್ತು. ಯಾವುದೋ ತೋಟದಲ್ಲಿ ದುಷ್ಕರ್ಮಿಗಳು ಉದ್ದೇಶ ಪೂರ್ವಕವಾಗಿ ಮಂಗಗಳಿಗೆ ವಿಷವಿಟ್ಟು ಅದರ ಸಾವಿಗೆ ಕಾರಣರಾಗಿದ್ದು, ಈ ಮಂಗಗಳನ್ನು ಮಾರುತಿ ಓಮ್ನಿಕಾರಿನಲ್ಲಿ ತುಂಬಿಸಿ ಬಾರಾಡಿ ಕಂಬಳದ ನಿರ್ಜನ ಪ್ರದೇಶದಲ್ಲಿ ಎಸೆದುಹೋಗಿದ್ದರು. ಬಾರಾಡಿ ಫ್ರೆಂಡ್ಸ್‍ನ ಸದಸ್ಯರು ಈ ಕುರಿತು ಅರಣ್ಯ ಇಲಾಖಾ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ತಂಡವು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಪುತ್ತೂರು: ರೋಗಿಯನ್ನು ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ಪಲ್ಟಿ...!

error: Content is protected !!
Scroll to Top