ಉಡುಪಿ: ಮಧ್ಯ ಸೇವನೆಗೆ ಹಣವಿಲ್ಲವೆಂದು ಮನನೊಂದು ವ್ಯಕ್ತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಉಡುಪಿ, ಅ.21: ಬ್ರಹ್ಮಾವರದ ಹೆಗ್ಗುಂಜೆ ಗ್ರಾಮದ ಹೊನ್ನೆಕುಂಬ್ರಿ ಎಂಬಲ್ಲಿ ಮದ್ಯ ಸೇವನೆಗೆ ಹಣವಿಲ್ಲವೆಂದು ನೊಂದ ವ್ಯಕ್ತಿಯೊಬ್ಬರು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿದೆ. ಅತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ರಾಮ ನಾಯ್ಕ(50) ಎಂದು ಗುರುತಿಸಲಾಗಿದೆ.

 

 

ಇವರು ಮದ್ಯ ಸೇವಿಸುವ ಚಟಹೊಂದಿದ್ದು, ಇವರು ಹೊನ್ನೆಕುಂಬ್ರಿ ಪರಿಸರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಕಳೆದ 4 ದಿನಗಳಿಂದ ಸರಿಯಾಗಿ ಕೆಲಸವಿಲ್ಲದೇ  ಮದ್ಯ ಸೇವನೆಗೆ ಹಣವಿಲ್ಲದ ಕಾರಣ ಮಾನಸಿಕವಾಗಿ ನೊಂದುಕೊಂಡು ಮನೆಯಲ್ಲಿ ಎನೇನೂ ಮಾತನಾಡುತ್ತಿದ್ದರು ಎಂದು ತಿಳಿದುಬಂದಿದೆ. ಮನೆಯಿಂದ ಹೊರಗೆ ಹೋದ ಬಗ್ಗೆ ತಾಯಿ ತಿಳಿಸಿದ್ದು, ನಂತರ ಮನೆಯ ಪರಿಸರದಲ್ಲಿ ಹುಡುಕಾಡಿದ್ದಾರೆ. ಕಳೆದ ದಿನ ಹೊನ್ನೆಕುಂಬ್ರಿ ಶೀನ ನಾಯ್ಕರ ಭತ್ತದ ಗದ್ದೆಯ ಪಕ್ಕದಲ್ಲಿ ಮರಕ್ಕೆ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಗೂಗಲ್ ನಕ್ಷೆಯಲ್ಲಿ ಕನ್ನಡ ಬಳಕೆ ► ಸಂತಸ ವ್ಯಕ್ತಪಡಿಸಿದ ಕನ್ನಡಿಗರು

 

 

error: Content is protected !!
Scroll to Top