ಪೇಟಿಎಂ ಗ್ರಾಹಕರಿಗೆ ಗುಡ್ ನ್ಯೂಸ್ ➤ ಪ್ರತಿ ವರ್ಗಾವಣೆಯಲ್ಲೂ ‘ಕ್ಯಾಶ್ ಬ್ಯಾಕ್’ ಸೌಲಭ್ಯ

(ನ್ಯೂಸ್ ಕಡಬ) newskadaba.com ನವದೆಹಲಿ, ಅ. 20. ಪೇಟಿಎಂ ನಿಂದ ಭಾರತೀಯ ಗ್ರಾಹಕರಿಗೆ ಖುಷಿ ಸುದ್ದಿ ದೊರಕಿದೆ. ಭಾರತದಲ್ಲಿ ಪೇಟಿಎಂ ಕ್ರೆಡಿಟ್ ಕಾರ್ಡ್ ಬಿಡುಗಡೆ ಮಾಡಿದ್ದು, ಈ ಕ್ರೆಡಿಟ್ ಕಾರ್ಡ್ ಮೂಲಕ ಪ್ರತಿ ಖರೀದಿಗೆ ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ.

ನೆಕ್ಸ್ಟ್ ಜನರೇಷನ್ ಕ್ರೆಡಿಟ್ ಕಾರ್ಡ್ ಇದಾಗಿದ್ದು, ಮುಂದಿನ 12-18 ತಿಂಗಳೊಳಗೆ 20 ಲಕ್ಷ ಕ್ರೆಡಿಟ್ ಕಾರ್ಡ್ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಈ ಕ್ರೆಡಿಟ್ ಕಾರ್ಡ್ ನೊಂದಿಗೆ ಅನೇಕ ವೈಶಿಷ್ಟ್ಯಗಳನ್ನು ನೀಡಲಾಗಿದ್ದು, ಅಪ್ಲಿಕೇಷನ್ ಮೂಲಕ ಕ್ರೆಡಿಟ್ ಕಾರ್ಡ್ ಪಿನ್ ಬದಲಿಸಬಹುದು, ವಿಳಾಸ ನವೀಕರಣ ಹಾಗೂ ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡಬಹುದು.

Also Read  ವಿಜಯ್ ದಿವಸ್ : ಸೈನಿಕರ ನಿಸ್ವಾರ್ಥ ಸಮರ್ಪಣೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ ನಮನ

ಕಾರ್ಡ್ ನಿಂದಾಗುವ ವಂಚನೆಯನ್ನು ತಪ್ಪಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ವಿಮೆ ಸೌಲಭ್ಯವನ್ನೂ ನೀಡಲಾಗಿದೆ. ಕ್ಯಾಶ್ ಬ್ಯಾಕ್ ಗಿಫ್ಟ್ ವೋಚರ್ ರೂಪದಲ್ಲಿರುತ್ತದೆ. ಗ್ರಾಹಕರ ಹಿನ್ನೆಲೆ, ಅವರ ವಹಿವಾಟು ಹಾಗೂ ಮಾರಾಟದ ವಿವರವನ್ನು ಪರಿಶೀಲಿಸಿ ನಂತರ ಕ್ರೆಡಿಟ್ ಕಾರ್ಡ್ ಅನ್ನು ನೀಡಲಾಗುತ್ತದೆ. ಅಪ್ಲಿಕೇಷನ್ ಪ್ರಕ್ರಿಯೆ ಆನ್ ಲೈನ್ ಆಗಿರುತ್ತದೆ ಎಂದು ತಿಳಿಸಿದೆ.

error: Content is protected !!
Scroll to Top